alex Certify ಖ್ಯಾತ ನಟಿ ನಯನತಾರಾ, ಬಾಯ್ ಫ್ರೆಂಡ್ ವಿಘ್ನೇಶ್ ಗೆ ಕೊರೋನಾ ಪಾಸಿಟಿವ್ ವದಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟಿ ನಯನತಾರಾ, ಬಾಯ್ ಫ್ರೆಂಡ್ ವಿಘ್ನೇಶ್ ಗೆ ಕೊರೋನಾ ಪಾಸಿಟಿವ್ ವದಂತಿ

ಖ್ಯಾತ ನಟಿ ನಯನತಾರಾ ಮತ್ತು ಅವರ ಭಾವಿ ಪತಿ ವಿಘ್ನೇಶ್ ಶಿವನ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದೆ.

ಹಿಂದಿನ ದಿನ ಚೆನ್ನೈನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಜಾಸ್ತಿಯಾಗಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅನೇಕ ನಟ, ನಟಿಯರು, ಕಲಾವಿದರು, ನಿರ್ದೇಶಕರು ಅಭಿಮಾನಿಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಚೆನ್ನೈ ನಿವಾಸದಲ್ಲಿ ತಂಗಿರುವ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರಿಗೆ ಸೋಂಕು ತಗುಲಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ.

ಈ ವಿಚಾರ ನಯನತಾರಾ ಮತ್ತು ವಿಘ್ನೇಶ್ ಅವರಿಗೆ ತಡವಾಗಿ ಗೊತ್ತಾಗಿ, ತಮ್ಮ ಆಪ್ತರಿಗೆ ಕರೆ ಮಾಡಿ ಏನೂ ಆಗಿಲ್ಲವೆಂದು ಮಾಹಿತಿ ನೀಡಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡದಂತೆ ಆಪ್ತರು ಮನವಿ ಮಾಡಿದ್ದು ಅಭಿಮಾನಿಗಳಲ್ಲಿದ್ದ ಆತಂಕ ದೂರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...