alex Certify ನಟ ನವಾಜುದ್ದೀನ್ ಸಿದ್ದಿಕಿ ಪತ್ನಿಯಿಂದ ಶಾಕಿಂಗ್ ಮಾಹಿತಿ: ಮಗಳನ್ನು ‘ಅನುಚಿತವಾಗಿ’ ತಬ್ಬಿಕೊಂಡಿದ್ದ ಮ್ಯಾನೇಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ನವಾಜುದ್ದೀನ್ ಸಿದ್ದಿಕಿ ಪತ್ನಿಯಿಂದ ಶಾಕಿಂಗ್ ಮಾಹಿತಿ: ಮಗಳನ್ನು ‘ಅನುಚಿತವಾಗಿ’ ತಬ್ಬಿಕೊಂಡಿದ್ದ ಮ್ಯಾನೇಜರ್

ನಟ ನವಾಜುದ್ದೀನ್ ಸಿದ್ದಿಕಿ ಮ್ಯಾನೇಜರ್ ತಮ್ಮ ಮಗಳನ್ನು ಅನುಚಿತವಾಗಿ ತಬ್ಬಿಕೊಂಡಿದ್ದಾರೆ ಎಂದು ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ ಆರೋಪಿಸಿದ್ದಾರೆ.

ತನ್ನ ಆರೋಪಗಳಿಗೆ ನವಾಜುದ್ದೀನ್ ಅವರ ಪ್ರತಿಕ್ರಿಯೆಗೆ ಉತ್ತರವಾಗಿ ಆಲಿಯಾ ಬುಧವಾರ ಎಂಟು ಪುಟಗಳ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆಲಿಯಾ ಅವರು ನವಾಜುದ್ದೀನ್ ವಿರುದ್ಧ ಇನ್ನೂ ಕೆಲವು ಆರೋಪ ಮಾಡಿದ್ದು, ‘ಬೇಜವಾಬ್ದಾರಿ ತಂದೆ’ ಎಂದು ಕರೆದಿದ್ದಾರೆ. ನವಾಜುದ್ದೀನ್ ತನ್ನ ಒಪ್ಪಿಗೆಯಿಲ್ಲದೆ ತನ್ನ ಮ್ಯಾನೇಜರ್‌ನೊಂದಿಗೆ ತಮ್ಮ ಮಕ್ಕಳನ್ನು ದುಬೈಗೆ ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆಕ್ಷೇಪಣೆಗಳ ನಂತರವೂ ಪುರುಷ ಮ್ಯಾನೇಜರ್ ತಮ್ಮ ಮಗಳನ್ನು ‘ಅನುಚಿತವಾಗಿ’ ಹಲವು ಬಾರಿ ತಬ್ಬಿಕೊಂಡಿದ್ದಾರೆ ಎಂದು ಆಲಿಯಾ ಆರೋಪಿಸಿದ್ದಾರೆ.

ತನ್ನ ಆಘಾತಕಾರಿ ಆರೋಪವನ್ನು ಸಾಬೀತುಪಡಿಸಲು ಆಲಿಯಾ ಆಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಆಡಿಯೋದಲ್ಲಿ ನವಾಜುದ್ದೀನ್ ತನ್ನ ಮ್ಯಾನೇಜರ್ ಅನ್ನು ನಂಬುತ್ತೇನೆ. ತಮ್ಮ ಮಕ್ಕಳನ್ನು ದುಬೈಗೆ ತನ್ನ ಮ್ಯಾನೇಜರ್‌ನೊಂದಿಗೆ ಕಳುಹಿಸಲು ಏನಾದರೂ ಸಮಸ್ಯೆಗಳಿದ್ದರೆ ಪೊಲೀಸ್ ದೂರು ದಾಖಲಿಸುವಂತೆ ಹೇಳಿರುವುದು ಕೇಳಿಬರುತ್ತದೆ.

ತಮ್ಮ ಇಮೇಜ್‌ಗೆ ಹಾನಿ ಮಾಡಲು ಮತ್ತು ಅವರ ವೃತ್ತಿಜೀವನವನ್ನು ಹಾಳುಮಾಡಲು ತಮ್ಮ ಮಕ್ಕಳನ್ನು ವಿವಾದಕ್ಕೆ ಎಳೆದಿದ್ದಕ್ಕಾಗಿ ನವಾಜುದ್ದೀನ್ ಅವರು ಆಲಿಯಾ ಅವರನ್ನು ಟೀಕಿಸಿದ್ದರು.

ಇಂದು ನಾನು ಗಳಿಸುತ್ತಿರುವುದು ನನ್ನ ಮಕ್ಕಳಿಬ್ಬರಿಗಾಗಿ ಮತ್ತು ಯಾವುದೇ ವ್ಯಕ್ತಿ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಶೋರಾ ಮತ್ತು ಯಾನಿಯನ್ನು ಪ್ರೀತಿಸುತ್ತೇನೆ. ಅವರ ಯೋಗಕ್ಷೇಮ ಮತ್ತು ಅವರ ಭವಿಷ್ಯವನ್ನು ಭದ್ರಪಡಿಸಲು ನಾನು ಯಾವುದೇ ಹಂತಕ್ಕೆ ಹೋಗುತ್ತೇನೆ. ನಾನು ಇಲ್ಲಿಯವರೆಗೆ ಎಲ್ಲಾ ಪ್ರಕರಣಗಳನ್ನು ಗೆದ್ದಿದ್ದೇನೆ ಮತ್ತು ನ್ಯಾಯಾಂಗದ ಮೇಲೆ ನನ್ನ ನಂಬಿಕೆಯನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.

ನವಾಜುದ್ದೀನ್ ಮತ್ತು ಆಲಿಯಾ 2009 ರಲ್ಲಿ ವಿವಾಹವಾದರು. ಆಲಿಯಾ 2021 ರಲ್ಲಿ ಚಿತ್ರಹಿಂಸೆ ಮತ್ತು ಕೌಟುಂಬಿಕ ಹಿಂಸಾಚಾರದ ಆಧಾರದ ಮೇಲೆ ವಿಚ್ಛೇದನದ ನೋಟಿಸ್ ಕಳುಹಿಸಿದರು. ನಂತರದಲ್ಲಿ ಇಬ್ಬರ ನಡುವೆ ಆರೋಪ, ಪ್ರತ್ಯಾರೋಪ ಕೇಳಿ ಬರುತ್ತಲೇ ಇವೆ. ಇತ್ತೀಚೆಗಷ್ಟೇ ನವಾಜುದ್ದೀನ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು.

https://www.instagram.com/aaliyanawazuddin/?utm_source=ig_embed&ig_rid=cb5b7784-a61e-4382-b0ea-d6fd1815cd7f

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...