alex Certify ಮಾಲ್ಡೀವ್ಸ್ ಪ್ರವಾಸದಲ್ಲಿರುವ ತಾರೆಯರಿಗೆ ನವಾಜುದ್ದೀನ್​ ಸಿದ್ದಿಕಿ ಕ್ಲಾಸ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್ ಪ್ರವಾಸದಲ್ಲಿರುವ ತಾರೆಯರಿಗೆ ನವಾಜುದ್ದೀನ್​ ಸಿದ್ದಿಕಿ ಕ್ಲಾಸ್..​..!

ಸಂಪೂರ್ಣ ದೇಶ ಕೊರೊನಾ 2ನೇ ಅಲೆಯಿಂದಾಗಿ ಕಂಗಾಲಾಗಿ ಹೋಗಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಅಮಾಯಕರು ಜೀವ ಬಿಡ್ತಿದ್ದಾರೆ.

ಈ ನಡುವೆ ಮಾಲ್ಡೀವ್ಸ್​ನಂತಹ ಐಷಾರಾಮಿ ಸ್ಥಳಗಳಲ್ಲಿ ಪ್ರವಾಸ ಮಾಡುತ್ತಾ ಜಾಲಿ ಮೂಡ್​ನಲ್ಲಿರುವ ಸಾರಾ ಅಲಿ ಖಾನ್​, ಟೈಗರ್ ಶ್ರಾಫ್​, ದಿಶಾ ಪಟಾನಿ, ಜಾನ್ವಿ ಕಪೂರ್​, ಆಲಿಯಾ ಭಟ್​, ರಣಬೀರ್​ ಕಪೂರ್​ ಸೇರಿದಂತೆ ವಿವಿಧ ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಟ ನವಾಜುದ್ದೀನ್​ ಸಿದ್ದಿಕಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರು ಅನಾರೋಗ್ಯಕ್ಕೀಡಾಗಿದ್ದಾರೆ. ಅನೇಕರು ತಮ್ಮ ಪ್ರೀತಿಪಾತ್ರರನ್ನ ಕಳೆದುಕೊಂಡಿದ್ದಾರೆ, ಆದರೆ ಭಾರತೀಯ ಸೆಲೆಬ್ರಿಟಿಗಳು ಮಾತ್ರ ರಜೆಯ ಮೋಜನ್ನ ಎಂಜಾಯ್​ ಮಾಡುತ್ತಾ ಇನ್​ಸ್ಟಾಗ್ರಾಂನಲ್ಲಿ ಫೋಟೋವನ್ನ ಹಾಕೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಈ ರೀತಿ ವೆಕೇಷನ್​ ಎಂಜಾಯ್​ ಮಾಡುವ ಬದಲು ಜನರ ಕಡೆಗೆ ನಿಮ್ಮ ಸಹಾನುಭೂತಿ ತೋರಿಸಿ ಎಂದು ಸಿದ್ದಿಕಿ ಆಕ್ರೋಶ ಹೊರಹಾಕಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಿದ್ದಿಕಿ ಬಾಲಿವುಡ್​ನ ಕೆಲ ಸೆಲಿಬ್ರಿಟಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ರು.

ʼಕೊರೊನಾʼ ಲಸಿಕೆ ಹಾಕಿಸಿಕೊಂಡವರಿಗೊಂದು ಖುಷಿ ಸುದ್ದಿ

ಈ ಜನರಂತೂ ಮಾಲ್ಡೀವ್ಸ್​ ನ್ನು ತಮಾಷೆಯ ವಸ್ತುವಾಗಿ ಮಾಡಿಕೊಂಡಿದ್ದಾರೆ. ಪ್ರವಾಸಿ ಇಲಾಖೆಯೊಂದಿಗೆ ಇವರ ಸಂಬಂಧ ಏನಿದೆ ಅನ್ನೋದು ನನಗೆ ತಿಳಿದಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಈ ನಿಮ್ಮ ರಜೆಯ ಮೋಜನ್ನ ಬಂದ್​ ಮಾಡಿ. ಎಲ್ಲರೂ ಕಷ್ಟದಲ್ಲಿದ್ದಾರೆ. ಕೋವಿಡ್ ಕೇಸ್​ಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಹೃದಯವಂತರಂತೆ ವರ್ತಿಸಿ. ನಿಮ್ಮ ಮೋಜಿನ ಮೂಲಕ ಕಷ್ಟದಲ್ಲಿರುವವರನ್ನ ಕೆಣಕಬೇಡಿ ಎಂದು ಹೇಳಿದ್ದಾರೆ.

ನೀವು ಯಾವಾಗ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗ್ತೀರಾ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಎಂದು ಥಟ್​ ಅಂತಾ ಉತ್ತರಿಸಿದ ಸಿದ್ದಿಕಿ, ನಾನು ನನ್ನ ಕುಟುಂಬದ ಜೊತೆಗೆ ನನ್ನ ತವರೂರು ಬುಧಾನಾದಲ್ಲಿದ್ದೇನೆ. ನನ್ನ ಪಾಲಿಗೆ ಅದೇ ಮಾಲ್ಡೀವ್ಸ್ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...