ಸಂಪೂರ್ಣ ದೇಶ ಕೊರೊನಾ 2ನೇ ಅಲೆಯಿಂದಾಗಿ ಕಂಗಾಲಾಗಿ ಹೋಗಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಅಮಾಯಕರು ಜೀವ ಬಿಡ್ತಿದ್ದಾರೆ.
ಈ ನಡುವೆ ಮಾಲ್ಡೀವ್ಸ್ನಂತಹ ಐಷಾರಾಮಿ ಸ್ಥಳಗಳಲ್ಲಿ ಪ್ರವಾಸ ಮಾಡುತ್ತಾ ಜಾಲಿ ಮೂಡ್ನಲ್ಲಿರುವ ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ದಿಶಾ ಪಟಾನಿ, ಜಾನ್ವಿ ಕಪೂರ್, ಆಲಿಯಾ ಭಟ್, ರಣಬೀರ್ ಕಪೂರ್ ಸೇರಿದಂತೆ ವಿವಿಧ ಬಾಲಿವುಡ್ ಸೆಲೆಬ್ರಿಟಿಗಳಿಗೆ ನಟ ನವಾಜುದ್ದೀನ್ ಸಿದ್ದಿಕಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಜನರು ಅನಾರೋಗ್ಯಕ್ಕೀಡಾಗಿದ್ದಾರೆ. ಅನೇಕರು ತಮ್ಮ ಪ್ರೀತಿಪಾತ್ರರನ್ನ ಕಳೆದುಕೊಂಡಿದ್ದಾರೆ, ಆದರೆ ಭಾರತೀಯ ಸೆಲೆಬ್ರಿಟಿಗಳು ಮಾತ್ರ ರಜೆಯ ಮೋಜನ್ನ ಎಂಜಾಯ್ ಮಾಡುತ್ತಾ ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನ ಹಾಕೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಈ ರೀತಿ ವೆಕೇಷನ್ ಎಂಜಾಯ್ ಮಾಡುವ ಬದಲು ಜನರ ಕಡೆಗೆ ನಿಮ್ಮ ಸಹಾನುಭೂತಿ ತೋರಿಸಿ ಎಂದು ಸಿದ್ದಿಕಿ ಆಕ್ರೋಶ ಹೊರಹಾಕಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಿದ್ದಿಕಿ ಬಾಲಿವುಡ್ನ ಕೆಲ ಸೆಲಿಬ್ರಿಟಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ರು.
ʼಕೊರೊನಾʼ ಲಸಿಕೆ ಹಾಕಿಸಿಕೊಂಡವರಿಗೊಂದು ಖುಷಿ ಸುದ್ದಿ
ಈ ಜನರಂತೂ ಮಾಲ್ಡೀವ್ಸ್ ನ್ನು ತಮಾಷೆಯ ವಸ್ತುವಾಗಿ ಮಾಡಿಕೊಂಡಿದ್ದಾರೆ. ಪ್ರವಾಸಿ ಇಲಾಖೆಯೊಂದಿಗೆ ಇವರ ಸಂಬಂಧ ಏನಿದೆ ಅನ್ನೋದು ನನಗೆ ತಿಳಿದಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಈ ನಿಮ್ಮ ರಜೆಯ ಮೋಜನ್ನ ಬಂದ್ ಮಾಡಿ. ಎಲ್ಲರೂ ಕಷ್ಟದಲ್ಲಿದ್ದಾರೆ. ಕೋವಿಡ್ ಕೇಸ್ಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಹೃದಯವಂತರಂತೆ ವರ್ತಿಸಿ. ನಿಮ್ಮ ಮೋಜಿನ ಮೂಲಕ ಕಷ್ಟದಲ್ಲಿರುವವರನ್ನ ಕೆಣಕಬೇಡಿ ಎಂದು ಹೇಳಿದ್ದಾರೆ.
ನೀವು ಯಾವಾಗ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗ್ತೀರಾ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಎಂದು ಥಟ್ ಅಂತಾ ಉತ್ತರಿಸಿದ ಸಿದ್ದಿಕಿ, ನಾನು ನನ್ನ ಕುಟುಂಬದ ಜೊತೆಗೆ ನನ್ನ ತವರೂರು ಬುಧಾನಾದಲ್ಲಿದ್ದೇನೆ. ನನ್ನ ಪಾಲಿಗೆ ಅದೇ ಮಾಲ್ಡೀವ್ಸ್ ಎಂದು ಹೇಳಿದ್ರು.