alex Certify ಬಾಲಿವುಡ್​ ಹಿರಿಯ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಹಿರಿಯ ನಟ ನಾಸಿರುದ್ದೀನ್​ ಶಾ ಆಸ್ಪತ್ರೆಗೆ ದಾಖಲು

ಬಾಲಿವುಡ್​ ಹಿರಿಯ ನಟ ನಾಸಿರುದ್ದೀನ್​ ಶಾ ಎರಡು ದಿನಗಳ ಹಿಂದೆ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿರುವ ನಾಸಿರುದ್ದೀನ್​ ಶಾ ಶ್ವಾಸಕೋಶದಲ್ಲಿ ಪ್ಯಾಚ್​​ಗಳು ಕಂಡು ಬಂದಿದೆ. ಪ್ರಸ್ತುತ ನಾಸಿರುದ್ದೀನ್​ ಶಾಗೆ ಚಿಕಿತ್ಸೆ ಮುಂದುವರಿದಿದೆ. ಪತ್ನಿ ರತ್ನಾ ಪಾಠಕ್​ ಶಾ ಆಸ್ಪತ್ರೆಯಲ್ಲೇ ಇದ್ದು ಪತಿಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಇಂದು ಬೆಳಗ್ಗೆ ನಿರ್ಮಾಪಕ ರಾಜ್​ ಕೌಶಲ್​ ಸಾವಿನ ವಾರ್ತೆ ಬಹಿರಂಗವಾಗುತ್ತಿದ್ದಂತೆಯೇ ನಾಸಿರುದ್ದೀನ್​ ಶಾ ಕುರಿತಾಗಿಯೂ ಕೆಲ ವದಂತಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದೆ. ಈ ಹಿಂದೆ ನಾಸಿರುದ್ದೀನ್​ ಶಾ ಆರೋಗ್ಯವಾಗಿ ಇದ್ದ ಸಮಯದಲ್ಲೂ ಹಲವು ಬಾರಿ ನಾಸಿರುದ್ದೀನ್​ ಶಾ ಆರೋಗ್ಯದ ಕುರಿತಾಗಿ ಸಾಕಷ್ಟು ವದಂತಿಗಳು ಹರಿದಾಡಿದ್ದವು.

ನಾಸಿರುದ್ದೀನ್​ ಶಾ ಆರೋಗ್ಯದ ಕುರಿತಂತೆ ಮಾಹಿತಿ ನೀಡಿದ ಅವರ ಮ್ಯಾನೇಜರ್​, ಕಳೆದ ಎರಡು ದಿನಗಳಿಂದ ನಾಸಿರುದ್ದೀನ್​ ಶಾ ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ನ್ಯುಮೋನಿಯಾ ಇರೋದ್ರಿಂದ ಸೂಕ್ತ ಚಿಕಿತ್ಸೆ ಮುಂದುವರಿದಿದೆ. ನಾಸಿರುದ್ದೀನ್​ ಶ್ವಾಸಕೋಶದಲ್ಲಿ ಪ್ಯಾಚ್​ಗಳು ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗೋದು ಅನಿವಾರ್ಯವಾಯ್ತು. ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿಸಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...