ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ಎರಡು ದಿನಗಳ ಹಿಂದೆ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿರುವ ನಾಸಿರುದ್ದೀನ್ ಶಾ ಶ್ವಾಸಕೋಶದಲ್ಲಿ ಪ್ಯಾಚ್ಗಳು ಕಂಡು ಬಂದಿದೆ. ಪ್ರಸ್ತುತ ನಾಸಿರುದ್ದೀನ್ ಶಾಗೆ ಚಿಕಿತ್ಸೆ ಮುಂದುವರಿದಿದೆ. ಪತ್ನಿ ರತ್ನಾ ಪಾಠಕ್ ಶಾ ಆಸ್ಪತ್ರೆಯಲ್ಲೇ ಇದ್ದು ಪತಿಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ನಿರ್ಮಾಪಕ ರಾಜ್ ಕೌಶಲ್ ಸಾವಿನ ವಾರ್ತೆ ಬಹಿರಂಗವಾಗುತ್ತಿದ್ದಂತೆಯೇ ನಾಸಿರುದ್ದೀನ್ ಶಾ ಕುರಿತಾಗಿಯೂ ಕೆಲ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ಹಿಂದೆ ನಾಸಿರುದ್ದೀನ್ ಶಾ ಆರೋಗ್ಯವಾಗಿ ಇದ್ದ ಸಮಯದಲ್ಲೂ ಹಲವು ಬಾರಿ ನಾಸಿರುದ್ದೀನ್ ಶಾ ಆರೋಗ್ಯದ ಕುರಿತಾಗಿ ಸಾಕಷ್ಟು ವದಂತಿಗಳು ಹರಿದಾಡಿದ್ದವು.
ನಾಸಿರುದ್ದೀನ್ ಶಾ ಆರೋಗ್ಯದ ಕುರಿತಂತೆ ಮಾಹಿತಿ ನೀಡಿದ ಅವರ ಮ್ಯಾನೇಜರ್, ಕಳೆದ ಎರಡು ದಿನಗಳಿಂದ ನಾಸಿರುದ್ದೀನ್ ಶಾ ಆಸ್ಪತ್ರೆಯಲ್ಲಿ ಇದ್ದಾರೆ. ಅವರಿಗೆ ನ್ಯುಮೋನಿಯಾ ಇರೋದ್ರಿಂದ ಸೂಕ್ತ ಚಿಕಿತ್ಸೆ ಮುಂದುವರಿದಿದೆ. ನಾಸಿರುದ್ದೀನ್ ಶ್ವಾಸಕೋಶದಲ್ಲಿ ಪ್ಯಾಚ್ಗಳು ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗೋದು ಅನಿವಾರ್ಯವಾಯ್ತು. ಅವರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರಿಸಿದೆ ಎಂದು ಹೇಳಿದ್ರು.