alex Certify ಬಾಲಿವುಡ್​ ನಟ ಅರ್ಜುನ್​ ರಾಮ್​ಪಾಲ್​ ನಿವಾಸದ ಮೇಲೆ ಎನ್​ಸಿಬಿ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ನಟ ಅರ್ಜುನ್​ ರಾಮ್​ಪಾಲ್​ ನಿವಾಸದ ಮೇಲೆ ಎನ್​ಸಿಬಿ ದಾಳಿ

ಬಾಲಿವುಡ್​ ನಟ ಅರ್ಜುನ್ ರಾಮ್​ಪಾಲ್​​ ನಿವಾಸದ ಮೇಲೆ ದಾಳಿ ನಡೆಸಿದ ಮಾದಕ ವಸ್ತು ನಿಯಂತ್ರಣ ವಿಭಾಗ (ಎನ್​ಸಿಬಿ) ತಲಾಶ್​ ನಡೆಸಿದೆ. ಅರ್ಜುನ್​ ರಾಮ್​ ಪಾಲ್​ಗೆ ಸೇರಿದ ಮುಂಬೈನಲ್ಲಿರುವ ಅಂಧೇರಿ, ಖಾರ್​ ಹಾಗೂ ಬಾಂದ್ರಾದಲ್ಲಿರುವ ನಿವಾಸಗಳ ಮೇಲೆ ಈ ದಾಳಿ ನಡೆದಿದೆ.

ಬಾಲಿವುಡ್​ ನಿರ್ಮಾಪಕ ಫಿರೋಜ್ ನಾಡಿಯಾದ್ವಾಲಾ ನಿವಾಸದ ಮೇಲೂ ಭಾನುವಾರ ದಾಳಿ ನಡೆಸಿದ್ದ ಎನ್ಸಿಬಿ 10 ಗ್ರಾಂ ಅಕ್ರಮ ಗಾಂಜಾ ವಶಪಡಿಸಿಕೊಂಡಿತ್ತು.

ಅಲ್ಲದೇ ಅಕ್ರಮ ಗಾಂಜಾ ಸಂಗ್ರಹ ಆರೋಪದಡಿಯಲ್ಲಿ ಫಿರೋಜ್ ಪತ್ನಿ ಶಬಾನಾ ಸಯೀದ್​​ರನ್ನ ಬಂಧಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಅರ್ಜುನ್​ ರಾಮ್​ ಪಾಲ್​ ನಿವಾಸದ ಮೇಲೂ ದಾಳಿ ನಡೆದಿದ್ದು ಶೋಧ ಕಾರ್ಯ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...