alex Certify ಕನಸಿನ ಪಾತ್ರದಲ್ಲಿ ನಟಿಸೋಕೆ ಶ್ರದ್ಧಾ ಕಪೂರ್​ ರೆಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನ ಪಾತ್ರದಲ್ಲಿ ನಟಿಸೋಕೆ ಶ್ರದ್ಧಾ ಕಪೂರ್​ ರೆಡಿ…!

ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ತಮ್ಮ ಮುಂದಿನ ಚಿತ್ರದಲ್ಲಿ ಇಚ್ಚಾಧಾರಿ ನಾಗಿನ್​ ಪಾತ್ರದ ಮೂಲಕ ಜನರನ್ನ ರಂಜಿಸೋಕೆ ಸಿದ್ಧತೆ ನಡೆಸಿದ್ದಾರೆ. ಈ ಚಿತ್ರಕ್ಕೆ ನಾಗಿನ್​ ಎಂದು ಹೆಸರಿಡಲಾಗಿದ್ದು ಹೊಸ ಪಾತ್ರ ನಿರ್ವಹಿಸೋಕೆ ಶ್ರದ್ಧಾ ಉತ್ಸುಕರಾಗಿದ್ದಾರಂತೆ.

ವ್ಯಾಪಾರ ವಿಶ್ಲೇಷಕ ತರಣ್​ ಆದರ್ಶ್​ ಈ ಸುದ್ದಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೊಂದು ಟ್ರೈಲಾಜಿ ಆಗಿದ್ದು, 3 ಫಿಲಂ ಸೀರೀಸ್​ಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ. ಈ ಚಿತ್ರಕ್ಕೆ ವಿಶಾಲ್​ ಫ್ಯೂರಿಯಾ ಆಕ್ಷನ್​ ಕಟ್​ ಹೇಳಲಿದ್ದಾರೆ.

ಬಾಲಿವುಡ್​ನಲ್ಲಿ ನಾಗಿಣಿ ಸಿನಿಮಾ ಇದೇ ಮೊದಲೇನಲ್ಲ. ಒಂದು ಕಾಲದಲ್ಲಿ ಇಡೀ ಬಾಲಿವುಡ್​ ಜಗತ್ತನ್ನೇ ಆಳಿದ್ದ ಶ್ರೀದೇವಿ, ರೇಖಾ ಹಾಗೂ ರೀನಾ ರಾಯ್​ ನಾಗಿಣಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಈ ವಿಚಾರವಾಗಿ ಟ್ವೀಟ್​ ಮಾಡಿರುವ ಶ್ರದ್ಧಾ ಕಪೂರ್, ನಾನು ಶ್ರೀದೇವಿಯವರ ನಾಗಿಣಿ ಪಾತ್ರಗಳನ್ನ ನೋಡಿಕೊಂಡೇ ಬೆಳೆದವಳು. ಚಿಕ್ಕಂದಿನಿಂದಲೂ ನನಗೆ ಇಂತಹದ್ದೊಂದು ಪಾತ್ರ ಮಾಡಬೇಕೆಂಬ ಕನಸಿತ್ತು. ಇದೀಗ ನನ್ನ ಕನಸು ಈಡೇರಿದೆ ಅಂತಾ ಸಂತಸ ವ್ಯಕ್ತಪಡಿಸಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...