
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧದ ದೇಶದ್ರೋಹ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ಮುಂಬೈ ಪೊಲೀಸರು ಕಂಗನಾಗೆ ನೋಟಿಸ್ ನೀಡಿದ್ದಾರೆ. ಆದರೆ, ತಮಗೆ ಸಮಯಾವಕಾಶ ನೀಡಬೇಕೆಂದು ಕಂಗನಾ ಮತ್ತು ಸಹೋದರಿ ಮನವಿ ಮಾಡಿದ್ದಾರೆ. ಸಹೋದರರ ಮದುವೆಗೆ ಸಿದ್ಧತೆ ನಡೆಯುತ್ತಿದೆ. ನವೆಂಬರ್ 15 ರ ನಂತರ ವಿಚಾರಣೆಗೆ ಹಾಜರಾಗುವುದಾಗಿ ಮುಂಬೈ ಪೊಲೀಸರಿಗೆ ಕಂಗನಾ ಮಾಹಿತಿ ನೀಡಿದ್ದಾರೆ.