alex Certify BREAKING: ಡ್ರಗ್ಸ್ ಪ್ರಕರಣದಲ್ಲಿ ‘ಬಿಗ್ ಬಾಸ್’ ಮಾಜಿ ಸ್ಪರ್ಧಿಗೆ ಬಿಗ್ ಶಾಕ್; ನಟ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ NCB ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಡ್ರಗ್ಸ್ ಪ್ರಕರಣದಲ್ಲಿ ‘ಬಿಗ್ ಬಾಸ್’ ಮಾಜಿ ಸ್ಪರ್ಧಿಗೆ ಬಿಗ್ ಶಾಕ್; ನಟ ಅರ್ಮಾನ್ ಕೊಹ್ಲಿ ನಿವಾಸದ ಮೇಲೆ NCB ದಾಳಿ

ಮುಂಬೈ: ‘ಬಿಗ್ ಬಾಸ್’ ಮಾಜಿ ಸ್ಪರ್ಧಿ, ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ನಿವಾಸ ಮೇಲೆ ಎನ್.ಸಿ.ಬಿ. ಅಧಿಕಾರಿಗಳು ದಾಳಿ ಮಾಡಿದ್ದಾರೆ.

2018 ರಲ್ಲಿ ಕೊಹ್ಲಿ ನಿವಾಸದಲ್ಲಿ ಅಬಕಾರಿ ಇಲಾಖೆಯಿಂದ ದಾಳಿ ಮಾಡಿ 41 ಬಾಟಲಿಗಳ ಸ್ಕಾಚ್ ವಿಸ್ಕಿಯನ್ನು ವಶಪಡಿಸಿಕೊಂಡಿದ್ದು, ಇದು ಕಾನೂನಿಗೆ ವಿರುದ್ಧವಾಗಿತ್ತು.

ಈಗ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಮಾನ್ ಕೊಹ್ಲಿ ನಿವಾಸದಲ್ಲಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್.ಸಿ.ಬಿ.) ಶನಿವಾರ ದಾಳಿ ನಡೆಸಿದೆ.

ಎನ್‌ಸಿಬಿ ಅಧಿಕಾರಿಯೊಬ್ಬರು ಪ್ರಸ್ತುತ ನಟನ ನಿವಾಸದಲ್ಲಿ ಶೋಧಗಳು ನಡೆಯುತ್ತಿವೆ ಎಂದು ದೃಢಪಡಿಸಿದರು, ಆದರೆ ಪ್ರಕರಣದ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

ಕೊಹ್ಲಿ ‘ಪ್ರೇಮ್ ರತನ್ ಧನ್ ಪಾಯೋ’ ಮತ್ತು ‘ಜಾನಿ ದುಷ್ಮನ್’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...