alex Certify ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿ ರಹಸ್ಯ ಕೆದಕುತ್ತಿರುವ NCB ಯಿಂದ ಮತ್ತೊಂದು ಮಹತ್ವದ ಕಾರ್ಯಾಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿ ರಹಸ್ಯ ಕೆದಕುತ್ತಿರುವ NCB ಯಿಂದ ಮತ್ತೊಂದು ಮಹತ್ವದ ಕಾರ್ಯಾಚರಣೆ

ಮುಂಬೈ: ಐಷಾರಾಮಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ರೇಡ್ ನಂತ್ರ ಮುಂಬೈನಲ್ಲಿ NCB ಅಧಿಕಾರಿಗಳು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ಬಾಂದ್ರಾದಲ್ಲಿ ಇಮ್ತಿಯಾಜ್ ಖತ್ರಿ ನಿವಾಸಗಳ ಮೇಲೆ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ ಬಾಲಿವುಡ್ ಸ್ಟಾರ್ ಗಳು, ಸೆಲೆಬ್ರಿಟಿಗಳಿಗೆ ಗೆಳೆತನ ಹೊಂದಿದ ಇಮ್ತಿಯಾಜ್ ಖತ್ರಿ ಡ್ರಗ್ಸ್ ನಂಟಿನ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಉದ್ಯಮಿ ಮತ್ತು ಫಿಲ್ಮ್ ಮೇಕರ್ ಆಗಿರುವ ಖತ್ರಿ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆದಿದೆ. ಪಾರ್ಟಿಗೆ ಡ್ರಗ್ಸ್ ಎಲ್ಲಿಂದ ಪೂರೈಕೆಯಾಗಿತ್ತು ಎಂಬ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ. ಈ ಮೂಲಕ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದ ಐಷಾರಾಮಿ ಹಡಗಿನ ಡ್ರಗ್ಸ್ ಪಾರ್ಟಿ ರಹಸ್ಯವನ್ನು NCB ಕೆದಕುತ್ತಿದ್ದು, ಡ್ರಗ್ಸ್ ಜಾಲದ ಬೆನ್ನುಹತ್ತಿದೆ. ಹೈಪ್ರೊಫೈಲ್ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮುಂದುವರೆದ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...