
ಈ ಫೋಟೋದಲ್ಲಿ ಶ್ರೀದೇವಿ, ಶೇಖರ್ ಕಪೂರ್, ಜಾವೇದ್ ಅಖ್ತರ್, ದಿವಂಗತ ಗುಲ್ಶನ್ ಖಾಣ್ ಹಾಗೂ ಸತೀಶ್ ಕೌಶಿಕ್(ಎಡದಿಂದ ಬಲಕ್ಕೆ) ಇದ್ದಾರೆ. ಆದರೆ ಅನಿಲ್ ಕಪೂರ್ ಮಾತ್ರ ಕಾಣುತ್ತಿಲ್ಲ. ಇದನ್ನ ಗಮನಿಸಿದ ಅಭಿಮಾನಿಗಳು ಅನಿಲ್ ಕಪೂರ್ ಮಿಸ್ಟರ್ ಇಂಡಿಯಾ ಆಗಿದ್ದಾರೆ, ಅನಿಲ್ ಕಪೂರ್ ಈ ಫೋಟೋದಲ್ಲಿ ಕಾಣ್ತಿಲ್ಲ. ಬಹುಶಃ ಮಿ. ಇಂಡಿಯಾ ವಾಚ್ ಹಾಕಿಕೊಂಡಿರಬಹುದು ಎಂದೆಲ್ಲ ಕಮೆಂಟ್ ಮಾಡ್ತಿದ್ದಾರೆ.
ಆಟೋ ಚಾಲಕನ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ……!
ಮಿಸ್ಟರ್ ಇಂಡಿಯಾ ಸಿನಿಮಾದಲ್ಲಿ ಅನಿಲ್ ಕಪೂರ್ ಅರುಣ್ ವರ್ಮಾ ಎಂಬ ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ಅರುಣ್ ವರ್ಮಾ ಬಳಿ ಇದ್ದ ವಾಚ್ನ ಸಹಾಯದಿಂದ ಆತ ಕಣ್ಮರೆಯಾಗಬಹುದಾಗಿತ್ತು. ಇದೇ ಈ ಮೂವಿಯ ಮುಖ್ಯ ವಸ್ತುವಾಗಿದೆ. ಇನ್ನು ಈ ಸಿನಿಮಾದಲ್ಲಿ ದಿವಂಗತ ಅಮ್ರಿಶ್ ಪುರಿ ನಟಿಸಿದ್ದ ಮೊಗೆಂಬೋ ಪಾತ್ರ ಕೂಡ ಭಾರೀ ಸದ್ದು ಮಾಡಿತ್ತು.
https://www.instagram.com/p/CMbHo-BDmsO/?utm_source=ig_web_copy_link