alex Certify ಶೂಟಿಂಗ್​ ನಡುವೆಯೇ ಕುಸಿದು ಬಿದ್ದ ಹಿರಿಯ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂಟಿಂಗ್​ ನಡುವೆಯೇ ಕುಸಿದು ಬಿದ್ದ ಹಿರಿಯ ನಟ

ವಿವೇಕ್​ ಅಗ್ನಿಹೋತ್ರಿ ಮುಂದಿನ ಚಿತ್ರ ʼದಿ ಕಾಶ್ಮೀರ ಫೈಲ್ಸ್ʼ ಸಿನಿಮಾದ ಶೂಟಿಂಗ್​ನಲ್ಲಿದ್ದ ಬಾಲಿವುಡ್​ ಹಿರಿಯ ನಟ ಮಿಥುನ್​ ಚಕ್ರವರ್ತಿ ಸೆಟ್​ನಲ್ಲಿಯೇ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಶೂಟಿಂಗ್​ ಸ್ಥಗಿತಗೊಳಿಸಲಾಯ್ತ. ಉದರ ಸೋಂಕಿನಿಂದ ಅವರ ಸ್ಥಿತಿ ಹದಗೆಟ್ಟಿದೆ ಅಂತಾ ಮೂಲಗಳು ತಿಳಿಸಿವೆ.

ಚಿತ್ರತಂಡ ಮಸ್ಸೂರಿಯಲ್ಲಿ ಚಿತ್ರೀಕರಣ ನಡೆಸುತ್ತಿತ್ತು. ಈ ವೇಳೆ ಈ ಘಟನೆ ಸಂಭವಿಸಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸಿನಿಮಾ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ನಾವು ಸಿನಿಮಾದ ಆಕ್ಷನ್​ ಸನ್ನಿವೇಶಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದೆವು. ಈ ಚಿತ್ರೀಕರಣವು ಮಿಥುನ್​ ಚಕ್ರವರ್ತಿ ಪಾತ್ರದ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಶೂಟಿಂಗ್​ ಮಧ್ಯೆಯೇ ಅವರು ಅನಾರೋಗ್ಯಕ್ಕೀಡಾದರು ಎಂದು ಹೇಳಿದರು. ʼದಿ ಕಾಶ್ಮೀರ ಫೈಲ್ಸ್ʼ 2021ರಲ್ಲಿ ಬಿಡುಗಡೆಯಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...