alex Certify ʼಮಿಶನ್ ಕಾಶ್ಮೀರ್ʼ ಚಿತ್ರದ ಹಾಡು ವೈರಲ್ ಆಗಿದ್ದೇಕೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಶನ್ ಕಾಶ್ಮೀರ್ʼ ಚಿತ್ರದ ಹಾಡು ವೈರಲ್ ಆಗಿದ್ದೇಕೆ ಗೊತ್ತಾ..?

ಸ್ಟಾರ್ ನಟಿ ಪ್ರೀತಿ ಜಿಂಟಾ ನಟಿಸಿರುವ ʼಮಿಶನ್‌ ಕಾಶ್ಮೀರ್ʼ ಚಿತ್ರದ ಬುಂಬರೋ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

2000 ನೇ ಇಸವಿಯಲ್ಲಿ ತೆರೆಕಂಡ ಈ ಚಿತ್ರದ ಹಾಡನ್ನು ಸಂಗೀತಗಾರ ಹರ್ಷ ಪರಮಾರ್ ಟ್ವಿಟರ್ ನಲ್ಲಿ ಸೆಪ್ಟೆಂಬರ್ 11 ರಂದು ಅಪ್ಲೋಡ್ ಮಾಡಿದ್ದಾರೆ. ʼಮಿಶನ್ ಕಾಶ್ಮೀರ್ʼ‌ ಚಿತ್ರದ ಅಪರೂಪದ ಹಾಡು. ಅದನ್ನು ನುಡಿಸುವ ಪ್ರಯತ್ನ ನಮ್ಮದು ಎಂದು ಕ್ಯಾಪ್ಶನ್ ನೀಡಿದ್ದಾರೆ. ವಿಡಿಯೋವನ್ನು ಚಿತ್ರದಲ್ಲಿ ನಟಿಸಿದ್ದ ಪ್ರೀತಿ ಜಿಂಟಾ, ಹೃತಿಕ್ ರೋಶನ್ ಹಾಗೂ ಸಂಗೀತ ನಿರ್ದೇಶಕ ಶಂಕರ್ ಈಶನ್ ಲೊಯ್ ಅವರಿಗೆ ಹರ್ಷ ಟ್ಯಾಗ್ ಮಾಡಿದ್ದಾರೆ.

ವಿಡಿಯೋವನ್ನು ಟ್ವಿಟ್ಟರ್ ನಲ್ಲಿ 18.2 ಸಾವಿರ ಜನ ವೀಕ್ಷಿಸಿದ್ದಾರೆ. ಸ್ವತಃ ಪ್ರೀತಿ ಜಿಂಟಾ ಸಹ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ” ದಿಸ್ ಈಸ್ ಸೋ ಬ್ಯೂಟಿಫುಲ್, ಐ ಲವ್ ಇಟ್ (ಎಸ್.ಐ.ಸಿ)” ಎಂದು ಕಮೆಂಟ್ ಮಾಡಿದ್ದಾರೆ.‌ ವಿಡಿಯೋದಲ್ಲಿ ಒಟ್ಟು ಮೂವರು ಪುರುಷರು ಪಕ್ಕ ವಾದ್ಯಗಳನ್ನು ನುಡಿಸಿದ್ದು, ಒಬ್ಬ ಮಹಿಳೆ ಹಾಡಿದ್ದಾಳೆ. ಇಯರ್ ಫೋನ್ ಹಾಕಿಕೊಂಡು ಈ ಹಾಡು ಕೇಳಿ ಎಂದು ಹರ್ಷ ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...