ಶಿಲ್ಲಾಂಗ್: ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳಸಾಗಣೆ ನಿಯಂತ್ರಣ ಹಾಗೂ ಅಪಾಯದ ಬಗ್ಗೆ ಜಾಗೃತಿಗಾಗಿ ಮೇಘಾಲಯ ಪೊಲೀಸರು ಪ್ರಸಿದ್ಧ ಹಾಡೊಂದನ್ನು ಬಳಕೆ ಮಾಡಿದ್ದಾರೆ.
ಜಾನ್ ಲೆನಿನ್ ಅವರ ಪ್ರಸಿದ್ಧ ಗೀತೆ ‘ಇಮೇಜಿನ್’ ನ ಸಾಹಿತ್ಯವನ್ನು ಬದಲಿಸಿ ಮಾದಕ ದ್ರವ್ಯ ತ್ಯಜಿಸಿ ಉತ್ತಮ ಸಮಾಜ ನಿರ್ಮಿಸಿ ಎಂಬ ಸಂದೇಶ ಸಾರುತ್ತಿದ್ದಾರೆ.
ಭಾನುವಾರ ಅಂತಾರಾಷ್ಟ್ರೀಯ ಸಂಗೀತ ದಿನ ಹಾಗೂ ಜೂನ್ 26 ರಂದು ನಡೆಯುವ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ 4 ನಿಮಿಷ 38 ಸೆಕೆಂಡ್ ಗಳ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಮೇಘಾಲಯ ಡಿಜಿಪಿ ಆರ್.ಚಂದ್ರನಾಥ್ ಅವರು ಖಾಕಿ ವಿಬ್ಸ್ ಎಂಬ ವಿಡಿಯೋ ಹಾಡು ಬಿಡುಗಡೆಗೊಳಿಸಿದರು. “ಇಮೇಜಿನ್ ದೇರ್ ಈಸ್ ನೋ ಹೆವನ್” ಎಂಬ ಮೂಲತಃ ಸಾಹಿತ್ಯವನ್ನು ಬದಲಿಸಿ “ಇಮೇಜಿನ್ ನೋ ಎಡಿಕ್ಷನ್” ಎಂದು ಮೊದಲನೆಯ ಸಾಲು ಸೇರಿಸಲಾಗಿದೆ. ಮೇಘಾಲಯದ ಪೊಲೀಸ್ ಇಲಾಖೆಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಎರಡು ದಿನದಲ್ಲಿ 1.8 ಲಕ್ಷ ಜನರು ವೀಕ್ಷಿಸಿದ್ದು, 1600 ಜನರು ಶೇರ್ ಮಾಡಿದ್ದಾರೆ.
https://www.facebook.com/meghpolice/videos/275088013846167