
ದಿ ಫ್ಯಾಮಿಲಿ ಮ್ಯಾನ್ ಮೊದಲ ಸಿರೀಸ್ ಭರ್ಜರಿ ಯಶಸ್ಸನ್ನ ಗಳಿಸಿದ ಬಳಿಕ ನಿರ್ದೇಶಕ ರಾಜ್ ಹಾಗೂ ಡಿಕೆ ಸೇರಿ 2ನೇ ಸೀಸನ್ನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ರು. ನಿರೀಕ್ಷೆಯಂತೆ 2ನೇ ಸೀರಿಸ್ ಮೊದಲ ಸೀರಿಸ್ಗಿಂತಲೂ ಅದ್ಧೂರಿ ಪ್ರಮಾಣದಲ್ಲಿ ಯಶಸ್ಸನ್ನ ಗಳಿಸಿತು.
ಈ ಸಿರೀಸ್ನಲ್ಲಿ ಸಮಂತಾ ಅಕ್ಕಿನೇನಿ, ಮನೋಜ್ ಬಾಜಪೇಯಿ, ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ನ್ನ ಇಷ್ಟ ಪಟ್ಟ ಪ್ರೇಕ್ಷಕರು ಒಬ್ಬೊಬ್ಬರ ನಟನೆಯನ್ನ ಒಂದೊಂದು ರೀತಿಯಲ್ಲಿ ಬಣ್ಣಿಸ್ತಾ ಇದಾರೆ. ಈ ಎಲ್ಲದರ ನಡುವೆ ನಟ ಮನೋಜ್ ಬಾಜಪೇಯಿ ಕೂಡ ಸಂಪೂರ್ಣ ಸೀರಿಸ್ ನಲ್ಲಿ ತಮಗೆ ತುಂಬಾನೆ ಇಷ್ಟವೆನಿಸಿ ಸಹ ಕಲಾವಿದೆ ಹೆಸರನ್ನ ಟ್ವಿಟರ್ನಲ್ಲಿ ಬಯಲು ಮಾಡಿದ್ದಾರೆ.
ಟ್ವಿಟರ್ನಲ್ಲಿ ಫ್ಯಾಮಿಲಿ ಮ್ಯಾನ್ 2 ಸೀರಿಸ್ ಬಗ್ಗೆ ಹೇಳಿಕೊಂಡಿರುವ ಮನೋಜ್ ಬಾಜಪೇಯಿ ಸಂಪೂರ್ಣ ಸೀರಿಸ್ನಲ್ಲಿ ತಮಗೆ ಆಶ್ಲೇಷಾ ಠಾಕೂರ್ ತುಂಬಾನೇ ಇಷ್ಟವಾದ್ರು ಎಂದು ಹೇಳಿದ್ದಾರೆ. ಈ ಸರಣಿಯಲ್ಲಿ ಆಶ್ಲೇಷಾ, ಮನೋಜ್ರ ಪುತ್ರಿಯ ಪಾತ್ರವನ್ನ ನಿರ್ವಹಿಸಿದ್ರು.
ತಮ್ಮ ಟ್ವಿಟರ್ ಖಾತೆಯಲ್ಲಿ ಫ್ಯಾಮಿಲಿ ಮ್ಯಾನ್ ಸಿರೀಸ್ ಶೂಟಿಂಗ್ ಹಿಂದಿನ ಕೆಲ ದೃಶ್ಯಾವಳಿಗಳನ್ನ ಆಶ್ಲೇಷಾ ಹಂಚಿಕೊಂಡಿದ್ದರು. ಇದೀಗ ಈ ಟ್ವೀಟ್ಗೆ ರಿ ಟ್ವೀಟ್ ಮಾಡಿದ ಮನೋಜ್ ಬಾಜಪೇಯಿ ಆಶ್ಲೇಷಾರನ್ನ ಹಾಡಿ ಹೊಗಳಿದ್ದಾರೆ .