alex Certify ʼಫ್ಯಾಮಿಲಿ ಮ್ಯಾನ್ʼನ ನೆಚ್ಚಿನ ನಟಿ ಗುಟ್ಟು ಬಿಚ್ಚಿಟ್ಟ ಮನೋಜ್‌ ಬಾಜಪೇಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫ್ಯಾಮಿಲಿ ಮ್ಯಾನ್ʼನ ನೆಚ್ಚಿನ ನಟಿ ಗುಟ್ಟು ಬಿಚ್ಚಿಟ್ಟ ಮನೋಜ್‌ ಬಾಜಪೇಯಿ

ಒಟಿಟಿ ವೇದಿಕೆಯಲ್ಲಿ ಧೂಳೆಬ್ಬಿಸಿರುವ ದಿ ಫ್ಯಾಮಿಲಿ ಮ್ಯಾನ್​ ಸಿರೀಸ್​ನ್ನು ನೀವು ಸಹ ನೋಡಿದ್ದೀರಿ ಅಲ್ಲವೇ..? ನಿಮ್ಮ ಉತ್ತರ ಹೌದು ಎಂದಾದಲ್ಲಿ ಮನೋಜ್​ ಬಾಜಪೇಯಿ ನಟನೆ ಬಗ್ಗೆ ಹೆಚ್ಚಿನ ವಿವರಣೆಯನ್ನ ನಾವು ನೀಡುವ ಅಗತ್ಯವೇ ಇಲ್ಲ.

ದಿ ಫ್ಯಾಮಿಲಿ ಮ್ಯಾನ್​ ಮೊದಲ ಸಿರೀಸ್​ ಭರ್ಜರಿ ಯಶಸ್ಸನ್ನ ಗಳಿಸಿದ ಬಳಿಕ ನಿರ್ದೇಶಕ ರಾಜ್​ ಹಾಗೂ ಡಿಕೆ ಸೇರಿ 2ನೇ ಸೀಸನ್​ನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ರು. ನಿರೀಕ್ಷೆಯಂತೆ 2ನೇ ಸೀರಿಸ್​ ಮೊದಲ ಸೀರಿಸ್​ಗಿಂತಲೂ ಅದ್ಧೂರಿ ಪ್ರಮಾಣದಲ್ಲಿ ಯಶಸ್ಸನ್ನ ಗಳಿಸಿತು.

ಈ ಸಿರೀಸ್​ನಲ್ಲಿ ಸಮಂತಾ ಅಕ್ಕಿನೇನಿ, ಮನೋಜ್​ ಬಾಜಪೇಯಿ, ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್​ನ್ನ ಇಷ್ಟ ಪಟ್ಟ ಪ್ರೇಕ್ಷಕರು ಒಬ್ಬೊಬ್ಬರ ನಟನೆಯನ್ನ ಒಂದೊಂದು ರೀತಿಯಲ್ಲಿ ಬಣ್ಣಿಸ್ತಾ ಇದಾರೆ. ಈ ಎಲ್ಲದರ ನಡುವೆ ನಟ ಮನೋಜ್​ ಬಾಜಪೇಯಿ ಕೂಡ ಸಂಪೂರ್ಣ ಸೀರಿಸ್​​ ನಲ್ಲಿ ತಮಗೆ ತುಂಬಾನೆ ಇಷ್ಟವೆನಿಸಿ ಸಹ ಕಲಾವಿದೆ ಹೆಸರನ್ನ ಟ್ವಿಟರ್​ನಲ್ಲಿ ಬಯಲು ಮಾಡಿದ್ದಾರೆ.

ಟ್ವಿಟರ್​ನಲ್ಲಿ ಫ್ಯಾಮಿಲಿ ಮ್ಯಾನ್​ 2 ಸೀರಿಸ್​ ಬಗ್ಗೆ ಹೇಳಿಕೊಂಡಿರುವ ಮನೋಜ್ ಬಾಜಪೇಯಿ ಸಂಪೂರ್ಣ ಸೀರಿಸ್​ನಲ್ಲಿ ತಮಗೆ ಆಶ್ಲೇಷಾ ಠಾಕೂರ್​ ತುಂಬಾನೇ ಇಷ್ಟವಾದ್ರು ಎಂದು ಹೇಳಿದ್ದಾರೆ. ಈ ಸರಣಿಯಲ್ಲಿ ಆಶ್ಲೇಷಾ, ಮನೋಜ್​ರ ಪುತ್ರಿಯ ಪಾತ್ರವನ್ನ ನಿರ್ವಹಿಸಿದ್ರು.

ತಮ್ಮ ಟ್ವಿಟರ್ ಖಾತೆಯಲ್ಲಿ ಫ್ಯಾಮಿಲಿ ಮ್ಯಾನ್​ ಸಿರೀಸ್​ ಶೂಟಿಂಗ್​ ಹಿಂದಿನ ಕೆಲ ದೃಶ್ಯಾವಳಿಗಳನ್ನ ಆಶ್ಲೇಷಾ ಹಂಚಿಕೊಂಡಿದ್ದರು. ಇದೀಗ ಈ ಟ್ವೀಟ್​ಗೆ ರಿ ಟ್ವೀಟ್​ ಮಾಡಿದ ಮನೋಜ್​ ಬಾಜಪೇಯಿ ಆಶ್ಲೇಷಾರನ್ನ ಹಾಡಿ ಹೊಗಳಿದ್ದಾರೆ .

— manoj bajpayee (@BajpayeeManoj) June 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...