alex Certify BIG SHOCKING: ಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ಬೆಂಗಳೂರು ಏರ್ಪೋರ್ಟ್ ನಲ್ಲಿ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ಬೆಂಗಳೂರು ಏರ್ಪೋರ್ಟ್ ನಲ್ಲಿ ಘಟನೆ

ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಸಹ ಪ್ರಯಾಣಿಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಹಪ್ರಯಾಣಿಕ ಮತ್ತು ವಿಜಯ್ ಸೇತುಪತಿ ಪಿಎ ನಡುವೆ ಜಗಳವಾಗಿದೆ.

ಏರ್ಪೋರ್ಟ್ ನಲ್ಲಿ ಇಳಿದು ಬರುವಾಗ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಹಿಂದಿನಿಂದ ಬಂದು ವಿಜಯ್ ಸೇತುಪತಿ ಮೇಲೆ ಸಹಪ್ರಯಾಣಿಕ ಹಲ್ಲೆಗೆ ಯತ್ನಿಸಿದ್ದಾನೆ. ಬಳಿಕ ವಿಜಯ್ ಸೇತುಪತಿ ಮತ್ತು ಸಹಪ್ರಯಾಣಿಕ ಏರ್ಪೋರ್ಟ್ ಠಾಣೆಗೆ ಹೋಗಿದ್ದು ಪೊಲೀಸರು ಅಪಾಲಜಿ ಬರೆಸಿಕೊಂಡು ರಾಜಿ ಸಂಧಾನ ಮಾಡಿಸಿ ಇಬ್ಬರನ್ನೂ ಕಳುಹಿಸಿದ್ದಾರೆ. ರಿಯಾಲಿಟಿ ಶೋನ ಶೂಟಿಂಗ್ ನನಲ್ಲಿ ಭಾಗಿಯಾಗಲು ನಿನ್ನೆ ರಾತ್ರಿ ವಿಜಯ್ ಸೇತುಪತಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...