ಟೀಂ ಇಂಡಿಯಾ ಆಟಗಾರ ಮಹಮ್ಮದ್ ಶಮಿ ವಿಚ್ಚೇದಿತ ಪತ್ನಿಯನ್ನ ಬೆದರಿಸಿದ ಆರೋಪದಡಿಯಲ್ಲಿ 25 ವರ್ಷದ ಯುವಕನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಜಹಾನ್ ಸಲ್ಲಿಸಿದ ದೂರನ್ನ ಆಧರಿಸಿ ಕಳೆದ ಎರಡು ತಿಂಗಳಿನಿಂದ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ವ್ಯಕ್ತಿಯನ್ನ ಕ್ಯಾನಿಂಗ್ ಸ್ಟೇಷನ್ ಪೊಲೀಸರು ಬಂಧಿಸಿದ್ದಾರೆ.
ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ವ್ಯಕ್ತಿ ಹಣ ಕೊಡದೇ ಹೋದಲ್ಲಿ ವೈಯಕ್ತಿಕ ಫೋಟೋಗಳು ಹಾಗೂ ಮೊಬೈಲ್ ನಂಬರ್ನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಜಹಾನ್ಗೆ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.