alex Certify ಈಜಲು ಹೋಗಿ ಜಲಸಮಾಧಿಯಾದ ಮಲಯಾಳಂ ನಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜಲು ಹೋಗಿ ಜಲಸಮಾಧಿಯಾದ ಮಲಯಾಳಂ ನಟ…!

ಅಯ್ಯಪ್ಪನ್ನಂ ಕೊಶಿಯಮ್​ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿ ಪಾತ್ರ ವಹಿಸಿ ಜನ ಮನ ಗೆದ್ದಿದ್ದ ಮಲಯಾಳಂ ನಟ ಅನಿಲ್​ ನೆದಮಂಗಡು ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನಿಲ್​ ತಮ್ಮ ಮುಂಬರುವ ಸಿನಿಮಾ ಪೀಸ್​ ಚಿತ್ರೀಕರಣಕ್ಕಾಗಿ ತೋಡುಪುಳಕ್ಕೆ ತೆರಳಿದ್ದರು. ಶೂಟಿಂಗ್​ ವಿರಾಮದ ಬಳಿಕ ಸ್ನೇಹಿತರ ಜೊತೆ ಈಜಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.

48 ವರ್ಷದ ಅನಿಲ್​ ಮಲಯಾಳಂ ಟಿವಿ ಚಾನೆಲ್​ಗಳಲ್ಲಿ ನಿರೂಪಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಎನ್ಜನ್ ಸ್ಟೀವ್ ಲೋಪೆಜ್”, “ಪಾವಡಾ”, “ಕಮ್ಮಟ್ಟಿ ಪದಮ್”, “ಕಿಸ್ಮತ್”, “ಪೊರಿಂಜು ಮರಿಯಮ್ ಜೋಸ್” ಅಯ್ಯಪ್ಪನ್ನಂ ಕೋಶಿಯಮ್ ಇವರಿಗೆ ಹೆಸರು ತಂದು ಕೊಟ್ಟ ಸಿನಿಮಾಗಳಾಗಿವೆ .

ಇನ್ನು ಅನಿಲ್​ ನಿಧನಕ್ಕೆ ಖ್ಯಾತ ನಟರಾದ ಪೃಥ್ವಿರಾಜ್​, ದುಲ್ಕರ್​ ಸಲ್ಮಾನ್, ಬಿಜು ಮೆನನ್ ಹಾಗೂ ಸೂರಜ್​ ವೆಂಜರಮುಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

https://www.instagram.com/p/CJOSGmppxxS/?utm_source=ig_web_copy_link

https://www.instagram.com/p/CJOotDDgyXA/?utm_source=ig_web_copy_link

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...