ಅಯ್ಯಪ್ಪನ್ನಂ ಕೊಶಿಯಮ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ವಹಿಸಿ ಜನ ಮನ ಗೆದ್ದಿದ್ದ ಮಲಯಾಳಂ ನಟ ಅನಿಲ್ ನೆದಮಂಗಡು ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡಲು ಹೋಗಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಿಲ್ ತಮ್ಮ ಮುಂಬರುವ ಸಿನಿಮಾ ಪೀಸ್ ಚಿತ್ರೀಕರಣಕ್ಕಾಗಿ ತೋಡುಪುಳಕ್ಕೆ ತೆರಳಿದ್ದರು. ಶೂಟಿಂಗ್ ವಿರಾಮದ ಬಳಿಕ ಸ್ನೇಹಿತರ ಜೊತೆ ಈಜಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.
48 ವರ್ಷದ ಅನಿಲ್ ಮಲಯಾಳಂ ಟಿವಿ ಚಾನೆಲ್ಗಳಲ್ಲಿ ನಿರೂಪಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಎನ್ಜನ್ ಸ್ಟೀವ್ ಲೋಪೆಜ್”, “ಪಾವಡಾ”, “ಕಮ್ಮಟ್ಟಿ ಪದಮ್”, “ಕಿಸ್ಮತ್”, “ಪೊರಿಂಜು ಮರಿಯಮ್ ಜೋಸ್” ಅಯ್ಯಪ್ಪನ್ನಂ ಕೋಶಿಯಮ್ ಇವರಿಗೆ ಹೆಸರು ತಂದು ಕೊಟ್ಟ ಸಿನಿಮಾಗಳಾಗಿವೆ .
ಇನ್ನು ಅನಿಲ್ ನಿಧನಕ್ಕೆ ಖ್ಯಾತ ನಟರಾದ ಪೃಥ್ವಿರಾಜ್, ದುಲ್ಕರ್ ಸಲ್ಮಾನ್, ಬಿಜು ಮೆನನ್ ಹಾಗೂ ಸೂರಜ್ ವೆಂಜರಮುಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
https://www.instagram.com/p/CJOSGmppxxS/?utm_source=ig_web_copy_link
https://www.instagram.com/p/CJOotDDgyXA/?utm_source=ig_web_copy_link