
ಬಾಲಿವುಡ್ ನಟ ಅರ್ಜುನ್ ಕಪೂರ್ 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಟಾರ್ ನಟನ ಬರ್ತಡೇ ಸಂಭ್ರಮಕ್ಕೆ ಸ್ನೇಹಿತರು , ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಮಲೈಕಾ ಅರೋರಾ ಕೂಡ ಅರ್ಜುನ್ ಕಪೂರ್ ಜನ್ಮದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ.
BIG NEWS: ರಾಜ್ಯ ಕಾಂಗ್ರೆಸ್ ಗೆ ಮೇಜರ್ ಸರ್ಜರಿ
ಮಲೈಕಾ ಹಾಗೂ ಅರ್ಜುನ್ ಕಪೂರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ. ಇವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರೋಮ್ಯಾಂಟಿಕ್ ಫೋಟೋಗಳನ್ನ ಶೇರ್ ಮಾಡ್ತಾನೇ ಇರ್ತಾರೆ. ಇದೀಗ ಬರ್ತಡೇ ನಿಮಿತ್ತ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿರುವ ಮಲೈಕಾ, ಹ್ಯಾಪಿ ಬರ್ತಡೇ ಸನ್ಶೈನ್ ಎಂದು ಹೇಳಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://www.instagram.com/p/CQlHNc-ByWS/?utm_source=ig_web_copy_link
https://www.instagram.com/p/BzLhmO-BuLJ/?utm_source=ig_web_copy_link
https://www.instagram.com/p/CJfdGUIBOrG/?utm_source=ig_web_copy_link