alex Certify ಬಾಲಿವುಡ್ ನಟಿ ಮಲೈಕಾಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ನಟಿ ಮಲೈಕಾಗೆ ಕೊರೊನಾ

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕೊರೊನಾ ಕಾಣಿಸಿಕೊಂಡಿದೆ. ಭಾನುವಾರ  ಮಲೈಕಾ ಅರೋರಾ ಸಹೋದರಿ ಅಮೃತಾ ಅರೋರಾಗೆ ಕೊರೊನಾ ಸೋಂಕಿರುವುದು ಧೃಡಪಟ್ಟಿತ್ತು. ಈಗ ಮಲೈಕಾಗೆ ಕೊರೊನಾ ಕಾಣಿಸಿಕೊಂಡಿರುವ ಸುದ್ದಿ ಹೊರಬಿದ್ದಿದೆ.

ಅರ್ಜುನ್ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿ ಈ ವಿಷ್ಯ ತಿಳಿಸಿದ್ದಾರೆ. ನಂತ್ರ ಮಲೈಕಾ ಕೂಡ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ಕೊರೊನಾ ಪರೀಕ್ಷಾ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ನಾನು ಆರೋಗ್ಯವಾಗಿದ್ದೇನೆಂದು ಮಲೈಕಾ ಹೇಳಿದ್ದಾರೆ.

ಕೊರೊನಾ ಪರೀಕ್ಷಾ ವರದಿ ಇಂದು ಬಂದಿದ್ದು, ಕೊರೊನಾ ಸೋಂಕಿದೆ. ಆದ್ರೆ ಯಾವುದೇ ರೋಗ ಲಕ್ಷಣವಿಲ್ಲ. ಆರೋಗ್ಯವಾಗಿದ್ದರೂ ನಿಯಮ ಪಾಲನೆ ಮಾಡ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ನೀವೆಲ್ಲರೂ ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ ಎಂದು ಬರೆದಿರುವ ಮಲೈಕಾ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇಂಡಿಯನ್ ಬೆಸ್ಟ್ ಡಾನ್ಸರ್ಸ್ ಕಾರ್ಯಕ್ರಮ ಜಡ್ಜ್ ಆಗಿರುವ ಮಲೈಕಾಗೆ ಅಲ್ಲಿಂದಲೇ ಕೊರೊನಾ ಬಂದಿದೆ. ಸೆಟ್ ನಲ್ಲಿ ನಾಲ್ಕೈದು ಮಂದಿಗೆ ಕೊರೊನಾ ಕಾಣಿಸಿಕೊಂಡಿತ್ತು ಎನ್ನಲಾಗಿದೆ. 10 ದಿನಗಳ ಹಿಂದಷ್ಟೆ ಗರ್ಭಿಣಿ ಕರೀನಾ ಕಪೂರ್ ರನ್ನು ಮಲೈಕಾ ಭೇಟಿಯಾಗಿದ್ದರು.

View this post on Instagram

??

A post shared by Malaika Arora (@malaikaaroraofficial) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...