alex Certify ಪುತ್ರನ ಬರ್ತಡೇ ಸಂಭ್ರಮದಲ್ಲಿ ನಟಿ ಮಲೈಕಾ ಅರೋರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಬರ್ತಡೇ ಸಂಭ್ರಮದಲ್ಲಿ ನಟಿ ಮಲೈಕಾ ಅರೋರಾ

ಬಾಲಿವುಡ್​ ನಟಿ ಮಲೈಕಾ ಅರೋರಾ ಪುತ್ರ ಅರ್ಹಾನ್​ 18ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪುತ್ರನ ಬರ್ತಡೇ ಪಾರ್ಟಿಯ ತಯಾರಿಯ ಫೋಟೋಗಳನ್ನ ನಟಿ ತಮ್ಮ ಇನ್ಸ್ಟಾ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ.

ಇನ್ನು ಮಲೈಕಾ ಸಹೋದರಿ ಅಮೃತಾ ಅರೋರಾ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಅರ್ಹಾನ್​ ಬರ್ತಡೇ ವಿಶ್​ ಮಾಡಿದ್ದು …..ಮಲೈಕಾ ಹಾಗೂ ಮಲೈಕಾ ವಿಚ್ಚೇದಿತ ಪತಿ ಅರ್ಬಾಜ್​ ಖಾನ್​ರನ್ನ ಟ್ಯಾಗ್​ ಮಾಡಿದ್ದಾರೆ. ಇಂದು ರಾತ್ರಿ ಅರ್ಹಾನ್​ ಬರ್ತಡೆಯ ಅದ್ದೂರಿ ಪಾರ್ಟಿ ನಡೆಯಲಿದೆ.

19 ವರ್ಷದ ಹಿಂದೆ ಅರ್ಬಾಜ್​ ಖಾನ್​ರನ್ನ ವಿವಾಹವಾಗಿದ್ದ ಮಲೈಕಾ ಅರೋರಾ 2017ರಲ್ಲಿ ವಿಚ್ಚೇದನ ಪಡೆದಿದ್ದರು. ಈ ದಂಪತಿಗೆ ಅರ್ಹಾನ್​ ಖಾನ್​ ಹಾಗೂ ನಿರ್ವಾನ್​ ಖಾನ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಇದೀಗ ಮಲೈಕಾ ಅರೋರಾ ಹೆಸರು ಬಾಲಿವುಡ್​ ನಟ ಅರ್ಜುನ್​ ಕಪೂರ್​ ಅವರ ಜೊತೆ ಥಳುಕು ಹಾಕಿಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...