
ನವದೆಹಲಿ: ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಗೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಅವರು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದಾರೆ.
ಇದರ ಬೆನ್ನಲ್ಲೇ ಮತ್ತಷ್ಟು ಸಿನಿಮಾ ತಾರೆಯರಿಗೆ ಜಾರಿ ನಿರ್ದೇಶನಾಲಯ ಸಮ್ಮನ್ಸ್ ನೀಡಿದೆ. ಕಾಮಿಡಿ ಶೋ ಖ್ಯಾತಿಯ ನಟ ಕಪಿಲ್ ಶರ್ಮಾ, ನಟಿಯರಾದ ಹುಮಾ ಖುರೇಶಿ, ಹೀನಾ ಖಾನ್ ಅವರಿಗೆ ಆನ್ಲೈನ್ ಬೆಟ್ಟಿಂಗ್ ಪ್ರಚಾರದಲ್ಲಿ ಭಾಗಿಯಾದ ಸಂಬಂಧ ಮತ್ತು ಕಳೆದ ಸೆಪ್ಟಂಬರ್ ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಭಾಗಿಯಾದ ಕುರಿತು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ.
ಮಹದೇವ್ ಬುಕ್ ಆ್ಯಪ್ ಪ್ರಮೋಟರ್ ಸೌರಭ್ ಚಂದ್ರಾಕರ್ ಕಳೆದ ಫೆಬ್ರವರಿಯಲ್ಲಿ ಅವರ ವಿವಾಹ ಸಮಾರಂಭಕ್ಕಾಗಿ ಯುಎಇನಲ್ಲಿ ಭರ್ಜರಿ ಪಾರ್ಟಿ ನಡೆಸಿದ್ದರು. ಆ್ಯಪ್ ಯಶಸ್ಸಿಗೆ ಸಂಬಂಧಿಸಿದಂತೆ ಮತ್ತೊಂದು ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ಕಲಾವಿದರು ಭಾಗಿಯಾಗಿದ್ದರು. ಆನ್ ಲೈನ್ ಬೆಟ್ಟಿಂಗ್ ಪ್ರಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ ಎನ್ನಲಾಗಿದೆ.