alex Certify BIG NEWS: ಹೈಕೋರ್ಟ್ ಚಾಟಿ ಬೆನ್ನಲ್ಲೇ ಐಷಾರಾಮಿ ಕಾರಿನ ಸುಂಕ ಕಟ್ತೀನಿ, ದಂಡ ರದ್ದು ಮಾಡಿ ಎಂದು ವಿಜಯ್ ಮೇಲ್ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೈಕೋರ್ಟ್ ಚಾಟಿ ಬೆನ್ನಲ್ಲೇ ಐಷಾರಾಮಿ ಕಾರಿನ ಸುಂಕ ಕಟ್ತೀನಿ, ದಂಡ ರದ್ದು ಮಾಡಿ ಎಂದು ವಿಜಯ್ ಮೇಲ್ಮನವಿ

ಚೆನ್ನೈ: ಐಷಾರಾಮಿ ಕಾರಿನ ಆಮದು ಸುಂಕ ಪಾವತಿಸುತ್ತೇನೆ. ಹೈಕೋರ್ಟ್ ವಿಧಿಸಿದ್ದ ದಂಡವನ್ನು ರದ್ದು ಮಾಡಬೇಕೆಂದು ನಟ ವಿಜಯ್ ಮದ್ರಾಸ್ ಹೈಕೋರ್ಟಿಗೆ ಮನವಿ ಮೇಲ್ಮನವಿ ಸಲ್ಲಿಸಿದ್ದಾರೆ.

ವಿಜಯ್ ಅವರಿಗೆ ಹೈಕೋರ್ಟ್ ನಿಂದ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ವಿದೇಶಿ ಕಾರಿನ ಮೇಲೆ ಆಮದು ಸುಂಕವನ್ನು ರದ್ದು ಮಾಡಬೇಕೆಂದು ಅವರು ಕೋರಿದ್ದರು. ವಿಜಯ್ ಮನವಿ ತಿರಸ್ಕರಿಸಿ ದಂಡ ವಿಧಿಸಿದ ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಚಿತ್ರನಟರು ತೆರೆಯ ಮೇಲೆ ಮಾತ್ರ ಹೀರೋಗಳಾಗಬಾರದು ಎಂದು ಕಟುವಾಗಿ ಅಭಿಪ್ರಾಯವನ್ನು ತಿಳಿಸಿತ್ತು.

ಹೈಕೋರ್ಟ್ ನ ಅಭಿಪ್ರಾಯವನ್ನು ತೀರ್ಪಿನಿಂದ ತೆಗೆದುಹಾಕಬೇಕು. ಆಮದು ಸುಂಕವನ್ನು ಕಟ್ಟುತ್ತೇನೆ. ವಿಧಿಸಿರುವ ದಂಡವನ್ನು ರದ್ದುಗೊಳಿಸಿ ಎಂದು ಮದ್ರಾಸ್ ಹೈಕೋರ್ಟ್ ಗೆ ನಟ ವಿಜಯ್ ಮೇಲ್ಮನವಿ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...