
ಚೆನ್ನೈ: ಐಷಾರಾಮಿ ಕಾರಿನ ಆಮದು ಸುಂಕ ಪಾವತಿಸುತ್ತೇನೆ. ಹೈಕೋರ್ಟ್ ವಿಧಿಸಿದ್ದ ದಂಡವನ್ನು ರದ್ದು ಮಾಡಬೇಕೆಂದು ನಟ ವಿಜಯ್ ಮದ್ರಾಸ್ ಹೈಕೋರ್ಟಿಗೆ ಮನವಿ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಜಯ್ ಅವರಿಗೆ ಹೈಕೋರ್ಟ್ ನಿಂದ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ವಿದೇಶಿ ಕಾರಿನ ಮೇಲೆ ಆಮದು ಸುಂಕವನ್ನು ರದ್ದು ಮಾಡಬೇಕೆಂದು ಅವರು ಕೋರಿದ್ದರು. ವಿಜಯ್ ಮನವಿ ತಿರಸ್ಕರಿಸಿ ದಂಡ ವಿಧಿಸಿದ ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಚಿತ್ರನಟರು ತೆರೆಯ ಮೇಲೆ ಮಾತ್ರ ಹೀರೋಗಳಾಗಬಾರದು ಎಂದು ಕಟುವಾಗಿ ಅಭಿಪ್ರಾಯವನ್ನು ತಿಳಿಸಿತ್ತು.
ಹೈಕೋರ್ಟ್ ನ ಅಭಿಪ್ರಾಯವನ್ನು ತೀರ್ಪಿನಿಂದ ತೆಗೆದುಹಾಕಬೇಕು. ಆಮದು ಸುಂಕವನ್ನು ಕಟ್ಟುತ್ತೇನೆ. ವಿಧಿಸಿರುವ ದಂಡವನ್ನು ರದ್ದುಗೊಳಿಸಿ ಎಂದು ಮದ್ರಾಸ್ ಹೈಕೋರ್ಟ್ ಗೆ ನಟ ವಿಜಯ್ ಮೇಲ್ಮನವಿ ಸಲ್ಲಿಸಿದ್ದಾರೆ.