alex Certify ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದ ನಟ ಆರ್​. ಮಾಧವನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದ ನಟ ಆರ್​. ಮಾಧವನ್​

ಬಾಲಿವುಡ್​ ನಟ ಆರ್​. ಮಾಧವನ್​ ಟ್ವಿಟರ್​ನಲ್ಲಿ ಸದಾ ಆಕ್ಟಿವ್​ ಆಗಿರುವ ನಟ. ಮುಂದಿನ ವರ್ಷ ತೆರೆ ಕಾಣಲಿರುವ ತಮ್ಮ ಮಾರ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿರುವ ಮ್ಯಾಡಿ ಅಭಿಮಾನಿಗಳ ಮನದಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆರ್​. ಮಾಧವನ್​ ಕೈಗಾರಿಕೋದ್ಯಮಿ ರತನ್​ ಟಾಟಾರ ಜೀವನ ಚರಿತ್ರೆಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಾಧವನ್​ ನೀವು ರತನ್​ ಟಾಟಾ ಬಯೋಪಿಕ್​​ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೀರಾ ಎಂಬ ವಿಚಾರ ನಿಜವೇ..? ಇದು ನಿಜವೇ ಆದಲ್ಲಿ ಇದು ಅನೇಕರಿಗೆ ಪ್ರೇರಣೆಯಾಗಲಿದೆ ಎಂದು ಅಭಿಮಾನಿಯೊಬ್ಬರು ಟ್ವೀಟಾಯಿಸಿದ್ದರು.

ಅಭಿಮಾನಿಯ ಈ ಟ್ವೀಟ್​ಗೆ ಸ್ಪಷ್ಟನೆ ನೀಡಿರುವ ಮಾಧವನ್​, ದುರಾದೃಷ್ಟವಶಾತ್​ ಈ ವಿಚಾರ ನಿಜವಲ್ಲ. ಯಾರೋ ಅಭಿಮಾನಿಗಳು ಈ ಪೋಸ್ಟರ್​ನ್ನು ನಿರ್ಮಾಣ ಮಾಡಿದ್ದಾರೆ.ಸದ್ಯ ಅಂತಹ ಯಾವುದೇ ವಿಚಾರ ನನ್ನ ಮುಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

— Ranganathan Madhavan (@ActorMadhavan) December 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...