alex Certify ಕಿಂಗ್​ ಖಾನ್ ​ಗೆ ಹುಟ್ಟುಹಬ್ಬದ ಶುಭ ಕೋರಿದ ʼಬುರ್ಜ್ ಖಲೀಫಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಂಗ್​ ಖಾನ್ ​ಗೆ ಹುಟ್ಟುಹಬ್ಬದ ಶುಭ ಕೋರಿದ ʼಬುರ್ಜ್ ಖಲೀಫಾʼ

ಸೋಮವಾರ 55 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್​ ನಟ ಶಾರೂಖ್​ ಖಾನ್​ಗೆ ದುಬೈನ ಅಪ್ರತಿಮ ಗಗನಚುಂಬಿ ಕಟ್ಟಡ ವಿಶೇಷವಾದ ಶುಭಾಶಯವನ್ನ ತಿಳಿಸಿದೆ. ಐಪಿಎಲ್​ ಟೂರ್ನಿ ಹಿನ್ನೆಲೆ ಸದ್ಯ ಕಿಂಗ್​ ಖಾನ್​ ಕುಟುಂಬ ದುಬೈನಲ್ಲಿ ಬೀಡು ಬಿಟ್ಟಿದೆ. ಶಾರುಖ್​​ ಖಾನ್​ ಜನ್ಮದಿನದ ಶುಭಾಶಯ ಕೋರಿ ಬುರ್ಜ್​ ಖಲೀಫಾಗೆ ದೀಪಾಲಂಕಾರ ಮಾಡಿ ವಿಷ್​ ಮಾಡಲಾಗಿದೆ.

ತನ್ನ ಹುಟ್ಟುಹುಬ್ಬದ ಈ ವಿಶೇಷ ಶುಭಾಶಯದ ಫೋಟೋ ಶೇರ್​ ಮಾಡಿರುವ ಶಾರುಖ್​ ಖಾನ್​ ವಿಶ್ವದ ಅತಿದೊಡ್ಡ ಪರದೆ ಮೇಲೆ ನನ್ನನ್ನ ನೋಡ್ತಾ ಇರುವುದಕ್ಕೆ ನನಗೆ ಸಂತಸವಾಗುತ್ತಿದೆ. ಎಲ್ಲರಿಗೂ ಧನ್ಯವಾದ ಅಂತಾ ಬರೆದುಕೊಂಡಿದ್ದಾರೆ.

ಕಳೆದ ವರ್ಷದ ಶಾರುಖ್​ಖಾನ್​ ಜನ್ಮದಿನಾಚರಣೆ ದಿನವೂ ಬುರ್ಜ್ ಖಲೀಫಾ​ ವಿಶೇಷವಾಗಿ ಶುಭಾಶಯ ಕೋರಿತ್ತು. ಇನ್ನು ತಮ್ಮ ಜನ್ಮದಿನದ ಪ್ರಯುಕ್ತ ರಕ್ತದಾನ, ಪಿಪಿಇ ಕಿಟ್​ ಹಂಚಿಕೆ ಸೇರಿದಂತೆ ವಿವಿಧ ಸಮಾಜಸೇವೆ ಕೆಲಸ ಮಾಡಿದ ಅಭಿಮಾನಿಗಳಿಗೂ ಕಿಂಗ್​ ಖಾನ್​ ಧನ್ಯವಾದ ಅರ್ಪಿಸಿದ್ದಾರೆ.

2018ರಲ್ಲಿ ಶಾರುಖ್​ ಖಾನ್​ ಝಿರೋ ಸಿನಿಮಾ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು. ಇದಾದ ಬಳಿಕ ಶಾರೂಖ್​ ತಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋದನ್ನ ಅಧಿಕೃತವಾಗಿ ಪ್ರಕಟಿಸಿಲ್ಲ.

https://www.instagram.com/p/B4X1K57FhE-/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...