alex Certify ಕಾಮನ್​ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮನ್​ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ

ದೇಶದಲ್ಲಿ ಕೊರೊನಾ ವೈರಸ್​ 2ನೇ ಅಲೆ ಮಿತಿಮೀರಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಫೇಸ್​ ಮಾಸ್ಕ್​​ ಬಳಕೆ ಮಾಡುವ ಬಗ್ಗೆ ಒತ್ತಾಯಿಸುವ ಸಲುವಾಗಿ ಬಾಲಿವುಡ್​ ನಟಿ ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನ ಶೇರ್​ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿರುವ ನಟಿ ಪ್ರೀತಿ ಜಿಂಟಾ ಪ್ರತಿಯೊಬ್ಬರ ಬಳಿಯೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.

ನಿಮಗೆ ಏನಾದರೂ ವಾಸನೆ ಹಾಗೂ ರುಚಿಯ ಗ್ರಹಿಕೆ ನಿಂತು ಹೋಗಿದೆ ಎಂದಾದರೆ ಇದು ಕೊರೊನಾ ಸೋಂಕಿನ ಲಕ್ಷಣಗಳಾಗಿವೆ. ಹಾಗಂತ ಕಾಮನ್​ ಸೆನ್ಸ್​ ( ಸಾಮಾನ್ಯ ಜ್ಞಾನ) ಇಲ್ಲದೇ ಇರೋದು ಕೊರೊನಾದ ಲಕ್ಷಣವಲ್ಲ. ಆದರೆ ಈ ಕಾರಣಕ್ಕೆ ನೀವು ಸೋಂಕಿಗೆ ಒಳಗಾಗುತ್ತಿದ್ದೀರಾ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ದಯಮಾಡಿ ಮಾಸ್ಕ್​ ಧರಿಸಿ ಎಂದು ಪ್ರೀತಿ ಜಿಂಟಾ ಮನವಿ ಮಾಡಿದ್ದಾರೆ.

ಪ್ರೀತಿ ಜಿಂಟಾರ ಈ ಸಾರ್ವಜನಿಕ ಸಂದೇಶವನ್ನ ಕಂಡ ಬಾಲಿವುಡ್​ ನಟ ಹೃತಿಕ್​ ರೋಷನ್​ ಹಾಗೂ ಫಿಲಂ ಮೇಕರ್​ ಮುಕೇಶ್​ ಛಾಬ್ರಾ ಸೇರಿದಂತೆ ಅನೇಕರು ಲೈಕ್​ ಹಾಗೂ ಕಮೆಂಟ್​ಗಳ ಸುರಿಮಳೆ ಹರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...