ಕಾಮನ್ ಸೆನ್ಸ್ ಇಲ್ಲದವರಿಗೆ ಬರೋದು ಕೊರೊನಾ: ಪ್ರೀತಿ ಝಿಂಟಾ 23-03-2021 7:45AM IST / No Comments / Posted In: Latest News, Entertainment ದೇಶದಲ್ಲಿ ಕೊರೊನಾ ವೈರಸ್ 2ನೇ ಅಲೆ ಮಿತಿಮೀರಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸುವ ಹಾಗೂ ಫೇಸ್ ಮಾಸ್ಕ್ ಬಳಕೆ ಮಾಡುವ ಬಗ್ಗೆ ಒತ್ತಾಯಿಸುವ ಸಲುವಾಗಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನ ಶೇರ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ ಪ್ರೀತಿ ಜಿಂಟಾ ಪ್ರತಿಯೊಬ್ಬರ ಬಳಿಯೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ. ನಿಮಗೆ ಏನಾದರೂ ವಾಸನೆ ಹಾಗೂ ರುಚಿಯ ಗ್ರಹಿಕೆ ನಿಂತು ಹೋಗಿದೆ ಎಂದಾದರೆ ಇದು ಕೊರೊನಾ ಸೋಂಕಿನ ಲಕ್ಷಣಗಳಾಗಿವೆ. ಹಾಗಂತ ಕಾಮನ್ ಸೆನ್ಸ್ ( ಸಾಮಾನ್ಯ ಜ್ಞಾನ) ಇಲ್ಲದೇ ಇರೋದು ಕೊರೊನಾದ ಲಕ್ಷಣವಲ್ಲ. ಆದರೆ ಈ ಕಾರಣಕ್ಕೆ ನೀವು ಸೋಂಕಿಗೆ ಒಳಗಾಗುತ್ತಿದ್ದೀರಾ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ದಯಮಾಡಿ ಮಾಸ್ಕ್ ಧರಿಸಿ ಎಂದು ಪ್ರೀತಿ ಜಿಂಟಾ ಮನವಿ ಮಾಡಿದ್ದಾರೆ. ಪ್ರೀತಿ ಜಿಂಟಾರ ಈ ಸಾರ್ವಜನಿಕ ಸಂದೇಶವನ್ನ ಕಂಡ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಫಿಲಂ ಮೇಕರ್ ಮುಕೇಶ್ ಛಾಬ್ರಾ ಸೇರಿದಂತೆ ಅನೇಕರು ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿಸಿದ್ದಾರೆ.