![](https://kannadadunia.com/wp-content/uploads/2021/05/2021-05-01-1.png)
ಈ ವಿಡಿಯೋದಲ್ಲಿ ಪುಟ್ಟ ಬಾಲಕ ಐಕಾನಿಕ್ ಗೀತೆ ಬ್ಲೋವಿನ್ ಇನ್ ದ ವಿಂಡ್ ಹಾಡನ್ನ ತನ್ನ ಸುಮಧುರ ಕಂಠದಲ್ಲಿ ಹಾಡಿದ್ದಾನೆ. ಇಂಡಿಯನ್ ಪ್ಯೂಶನ್ ಬ್ರ್ಯಾಂಡ್ ಅದ್ವೈತಾದ ಚಿಂತಾಮಣಿ ಈ ಮುದ್ದಾದ ವಿಡಿಯೋವನ್ನ ಶೇರ್ ಮಾಡಿದ್ದಾರೆ. 2.15 ನಿಮಿಷದ ವಿಡಿಯೋದಲ್ಲಿ 7 ವರ್ಷದ ಬಾಲಕ ಅತ್ಯಂತ ಸುಮಧುರವಾಗಿ ಹಾಡಿದ್ರೆ ಬಾಲಕನ ತಂದೆ ಗಿಟಾರ್ ನುಡಿಸುತ್ತಿದ್ದಾರೆ.
1963ರ ಕಾಲದ ಈ ಗೀತೆ ಸ್ವಾತಂತ್ರ್ಯ, ಯುದ್ಧ ಹಾಗೂ ಶಾಂತಿಯ ಬಗ್ಗೆ ಹೇಳುತ್ತೆ. ಈ ಹಾಡಿನ ಮೂಲಕ ಅಮೆರಿಕ ಗಾಯಕ ಹಾಗೂ ಗೀತರಚನೆಕಾರ ಮಾನವ ಸಮಾಜದ ಹೇಗಿದೆ ಅನ್ನೋದನ್ನ ತುಂಬಾ ಅಚ್ಚುಕಟ್ಟಾಗಿ ಹೇಳಿದ್ದಾರೆ. ಕೊರೊನಾದಂತಹ ಈ ಕಷ್ಟದ ಸಂದರ್ಭದಲ್ಲಿ ಈ ಹಾಡಿನ ಸಾಹಿತ್ಯ ಇನ್ನಷ್ಟು ಹತ್ತಿರ ಎನಿಸೋದ್ರಲ್ಲಿ ಎರಡು ಮಾತಿಲ್ಲ.