alex Certify BIG NEWS: ಆಸ್ಕರ್ ಅಂಗಳದಲ್ಲಿ ‘ಜಲ್ಲಿಕಟ್ಟು’, ಭಾರತದಿಂದ ಅಧಿಕೃತ ಆಯ್ಕೆಯಾಗಿ ಕದ ತಟ್ಟಿದ ಮಲಯಾಳಂ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಸ್ಕರ್ ಅಂಗಳದಲ್ಲಿ ‘ಜಲ್ಲಿಕಟ್ಟು’, ಭಾರತದಿಂದ ಅಧಿಕೃತ ಆಯ್ಕೆಯಾಗಿ ಕದ ತಟ್ಟಿದ ಮಲಯಾಳಂ ಚಿತ್ರ

ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಆಸ್ಕರ್ ಅಂಗಳಕ್ಕೆ ಅಧಿಕೃತವಾಗಿ ಭಾರತದಿಂದ ಎಂಟ್ರಿ ಪಡೆದಿದೆ.

2019 ರ ಈ ಮಲಯಾಳಂ ಚಿತ್ರಕ್ಕೆ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಪ್ರವೇಶ ಸಿಕ್ಕಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಿಸಿದೆ.

‘ಜಲ್ಲಿಕಟ್ಟು’ ಚಿತ್ರದಲ್ಲಿ ಆಂಟನಿ ವರ್ಗೀಸ್, ಚೆಂಬನ್, ವಿನೋದ್ ಜೋಸ್, ಸಬುಮೊನ್ ಅಬುಸಮದ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೇಕಿಂಗ್, ಕಥೆ ಹಾಗೂ ನಿರ್ದೇಶನ ಆಯ್ಕೆಗಾರರನ್ನು ಸೆಳೆದಿದ್ದು ಈ ಚಿತ್ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 2021 ರ ಆಸ್ಕರ್ ಪ್ರಶಸ್ತಿಗೆ ಕದ ತಟ್ಟಲು ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...