alex Certify ಬಾಲಿವುಡ್​ ದಿಗ್ಗಜರ ಅಪರೂಪದ​ ಫೋಟೋ ಶೇರ್​ ಮಾಡಿದ ನಟಿ ಪದ್ಮಿನಿ ಕೊಲ್ಹಾಪುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ದಿಗ್ಗಜರ ಅಪರೂಪದ​ ಫೋಟೋ ಶೇರ್​ ಮಾಡಿದ ನಟಿ ಪದ್ಮಿನಿ ಕೊಲ್ಹಾಪುರಿ

ಲತಾ ಮಂಗೇಶ್ಕರ್​, ದಿಲೀಪ್​ ಕುಮಾರ್​, ದಿವಂಗತ ಕಿಶೋರ್​ ಕುಮಾರ್​, ಸಾಯಿರಾ ಬಾನು, ಲೀನಾ ಚಂದವಾರ್ಕರ್​​ ಹಾಗೂ ಉಷಾ ಮಂಗೇಶ್ಕರ್​ರಂತಹ ಲೆಜೆಂಡ್​ಗಳನ್ನ ಒಟ್ಟಿಗೇ ನೋಡುವ ಅವಕಾಶ ಸಿಗೋದು ತುಂಬಾನೇ ವಿರಳ. ಆದರೆ ನಟಿ ಪದ್ಮಿನಿ ಕೊಲ್ಹಾಪುರಿ ಮಾತ್ರ ಇಂತಹದ್ದೊಂದು ವಿಶೇಷ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಫೋಟೋದಲ್ಲಿ ನೀವು ಕಿಶೋರ್​ ಕುಮಾರ್​, ಲತಾ ಮಂಗೇಶ್ಕರ್​, ಲೀನಾ ಚಂದಾವರ್ಕರ್​, ಪದ್ಮಿನಿ ಕೊಲ್ಹಾಪುರಿ, ದಿಲೀಪ್​ ಕುಮಾರ್​ ಹಾಗೂ ಅವರ ಪತ್ನಿ ಸಾಯಿರಾ ಭಾನು ಮತ್ತು ಲತಾ ಮಂಗೇಶ್ಕರ್​ ಸಹೋದರಿ ಉಷಾ ಮಂಗೇಶ್ಕರ್​ರನ್ನ ಒಟ್ಟಿಗೆ ಕಾಣಬಹುದಾಗಿದೆ.

ನೃತ್ಯದ ಮೂಲಕ ʼವಿವಿಧತೆಯಲ್ಲಿ ಏಕತೆʼ ಸಂದೇಶ ಸಾರಿದ ಯುವಕರು

ಈ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ ಪದ್ಮಿನಿ, ವ್ಹಾವ್​….! ಈ ಫೋಟೋದಲ್ಲಿರುವ ಲೆಜೆಂಡ್​ಗಳನ್ನೊಮ್ಮೆ ನೋಡಿ. ಕಿಶೋರ್​ ಕುಮಾರ್​, ಲತಾ ಮಂಗೇಶ್ಕರ್​, ಲೀನಾ ಚಂದಾವರ್ಕರ್, ದಿಲೀಪ್ ಕುಮಾರ್​, ಸಾಯಿರಾ ಬಾನು ಹಾಗೂ ಉಷಾ ಮಂಗೇಶ್ಕರ್​ ಜೊತೆ ವೇದಿಕೆ ಹಂಚಿಕೊಂಡ ನಾನೇ ಧನ್ಯ ಎಂದು ಶೀರ್ಷಿಕೆ ನೀಡಿದ್ದಾರೆ.

ನಟಿ ಪದ್ಮಿನಿ ಕೊಲ್ಹಾಪುರಿ ಸದಾ ಈ ರೀತಿಯ ಥ್ರೋ ಬ್ಯಾಕ್​ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಳೆಯ ದಿನಗಳನ್ನ ಮೆಲಕು ಹಾಕುತ್ತಲೇ ಇರ್ತಾರೆ. ಈ ಹಿಂದೆ ಅವರು ಫೆಬ್ರವರಿ ತಿಂಗಳಲ್ಲಿ ತಮ್ಮ ಅತ್ತೆ, ಲತಾ ಮಂಗೇಶ್ಕರ್​ ಹಾಗೂ ಲೀನಾ ಚಂದಾವರ್ಕರ್​ ಜೊತೆಗಿದ್ದ ಫೋಟೋವನ್ನು ಶೇರ್​ ಮಾಡಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...