ಹಿಂದಿ ಕಿರುತೆರೆ ಧಾರವಾಹಿಯಲ್ಲಿ ಮಿಂಚಿದ್ದ ಹಿರಿಯ ನಟಿ ಝರೀನಾ ರೋಶನ್ ಖಾನ್ ವಿಧಿವಶರಾಗಿದ್ದಾರೆ.
ಏಕ್ತಾ ಕಪೂರ್ ನಿರ್ದೇಶನದ ಹೆಸರಾಂತ ಧಾರವಾಹಿ ಕುಂಕುಮ್ ಭಾಗ್ಯದಲ್ಲಿ ಝರೀನಾ ದಾಸಿ ಪಾತ್ರವನ್ನ ನಿಭಾಯಿಸಿದ್ದರು. 54 ವರ್ಷದ ಕಲಾವಿದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಿರಿಯ ನಟಿ ಅಗಲಿಕೆಗೆ ಕುಂಕುಮ್ ಭಾಗ್ಯ ತಂಡದ ಇತರೆ ಕಲಾವಿದರು ಕಂಬನಿ ಮಿಡಿದಿದ್ದಾರೆ. ಧಾರವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಶಬೀರ್ ಅಹ್ಲುವಾಲಿಯಾ ಹಾಗೂ ಶೃತಿ ಝಾ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಝರೀನಾ ಜೊತೆಗಿನ ಫೋಟೋವನ್ನ ಶೇರ್ ಮಾಡಿರೋ ಶಬೀರ್ ‘ಯೇ ಚಾಂದ್ ಸಾ ರೋಷನ್ ಚೆಹರಾ’ ಅಂತಾ ಬರೆದುಕೊಂಡಿದ್ದಾರೆ. ಇನ್ನುಳಿದಂತೆ ಶೃದ್ಧಾ ಆರ್ಯ, ಮ್ರುನಾಲ್ ಠಾಕೂರ್, ಅಂಕಿತ್ ಮೋಹನ್ ಸೇರಿದಂತೆ ಹಲವರು ಝರೀನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
https://www.instagram.com/p/CGfcxd-B5gN/?utm_source=ig_embed
https://www.instagram.com/p/CGfbKwpJp1A/?utm_source=ig_embed