alex Certify ಕಿರುತೆರೆ ಕಲಾವಿದೆ ಝರೀನಾ ರೋಶನ್​ ಖಾನ್​ ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುತೆರೆ ಕಲಾವಿದೆ ಝರೀನಾ ರೋಶನ್​ ಖಾನ್​ ವಿಧಿವಶ

ಹಿಂದಿ ಕಿರುತೆರೆ ಧಾರವಾಹಿಯಲ್ಲಿ ಮಿಂಚಿದ್ದ ಹಿರಿಯ ನಟಿ ಝರೀನಾ ರೋಶನ್​ ಖಾನ್​ ವಿಧಿವಶರಾಗಿದ್ದಾರೆ.

ಏಕ್ತಾ ಕಪೂರ್‌ ನಿರ್ದೇಶನದ ಹೆಸರಾಂತ ಧಾರವಾಹಿ ಕುಂಕುಮ್​ ಭಾಗ್ಯದಲ್ಲಿ ಝರೀನಾ ದಾಸಿ ಪಾತ್ರವನ್ನ ನಿಭಾಯಿಸಿದ್ದರು. 54 ವರ್ಷದ ಕಲಾವಿದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಿರಿಯ ನಟಿ ಅಗಲಿಕೆಗೆ ಕುಂಕುಮ್​ ಭಾಗ್ಯ ತಂಡದ ಇತರೆ ಕಲಾವಿದರು ಕಂಬನಿ ಮಿಡಿದಿದ್ದಾರೆ. ಧಾರವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಶಬೀರ್​ ಅಹ್ಲುವಾಲಿಯಾ ಹಾಗೂ ಶೃತಿ ಝಾ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.

ಝರೀನಾ ಜೊತೆಗಿನ ಫೋಟೋವನ್ನ ಶೇರ್​ ಮಾಡಿರೋ ಶಬೀರ್​ ‘ಯೇ ಚಾಂದ್​ ಸಾ ರೋಷನ್​ ಚೆಹರಾ’ ಅಂತಾ ಬರೆದುಕೊಂಡಿದ್ದಾರೆ. ಇನ್ನುಳಿದಂತೆ ಶೃದ್ಧಾ ಆರ್ಯ, ಮ್ರುನಾಲ್​ ಠಾಕೂರ್​, ಅಂಕಿತ್​ ಮೋಹನ್​ ಸೇರಿದಂತೆ ಹಲವರು ಝರೀನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

https://www.instagram.com/p/CGfcxd-B5gN/?utm_source=ig_embed

View this post on Instagram

Ye chand sa Roshan Chehera ?

A post shared by Shabir Ahluwalia (@shabirahluwalia) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...