ನಟ ಅಮೀರ್ ಖಾನ್ ಸ್ನೇಹಿತ ಅಮೀನ್ ಹಾಜಿಯ ʼಕೊಯಿ ಜಾನೆ ನಾʼ ಚಿತ್ರದಲ್ಲಿ ವಿಶೇಷ ಡಾನ್ಸ್ ಮಾಡಲಿದ್ದಾರೆ. ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದ ಅಮೀರ್ ಡಾನ್ಸ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದೆ. ನಟ ಅಮೀರ್ ಖಾನ್ ಹಾಗೂ ಎಲಿ ಅವ್ರಾಮ್ ಡಾನ್ಸ್ ಮಾಡ್ತಿರುವ ವಿಡಿಯೋ ಇದಾಗಿದೆ.
ಎಲಿ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೀರ್ ಈ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಕುನಾಲ್ ಕಪೂರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ಗಂಟೆಗಳ ಹಿಂದೆ ಕುನಾಲ್, ಚಿತ್ರ ತಂಡದ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅಮೀರ್ ಖಾನ್ ಇದ್ದಾರೆ. ಅಮೀರ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆಂದು ಕುನಾಲ್ ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ಭೂಷನ್ ಕುಮಾರ್ ನಿರ್ಮಾಣ ಮಾಡ್ತಿದ್ದಾರೆ. ಇದು ಸೈಕಲಾಜಿಕಲ್ ಥ್ರಿಲ್ಲರ್ ಡ್ರಾಮಾ ಎಂದು ಚಿತ್ರತಂಡ ಹೇಳಿದೆ. ಅಮೀನ್ ಹಾಗೂ ಅಮೀರ್ ಖಾನ್ ಹಳೆ ಸ್ನೇಹಿತರು. ಲಗಾನ್, ಮಂಗಲ್ ಪಾಂಡೆ ಚಿತ್ರಗಳಲ್ಲೂ ಅಮೀನ್ ಕಾಣಿಸಿಕೊಂಡಿದ್ದರು.
https://www.instagram.com/p/CK1F7Ouhr60/?utm_source=ig_embed&utm_campaign=embed_video_watch_again