
ಅಂದಹಾಗೆ ದಿವಂಗತ ನಟ ಅಮ್ಜಾದ್ ಖಾನ್ಗೆ ಗುರುವಾರ ಬರ್ತಡೇ ಸಂಭ್ರಮ. ಸಿನಿ ಲೋಕದ ದಂತಕತೆ ಅಮ್ಜಾದ್ ಖಾನ್ರ ಕಿತನೇ ಆದ್ಮಿ ಥೆ ರೇ ಎಂಬ ಪದವನ್ನ ನೀವು ಗೂಗಲ್ನಲ್ಲಿ ಟೈಪ್ ಮಾಡಿದ್ರೆ ನಿಮಗೊಂದು ಸಪ್ರ್ರೈಸ್ ಕಾಣಸಿಗುತ್ತಿತ್ತು. ಕೂಡಲೇ ಕಾಲ್ಕುಲೇಟರ್ ಓಪನ್ ಆಗಿ ಅದರಲ್ಲಿ 2 ಎಂಬ ಉತ್ತರವನ್ನ ತೋರಿಸುತ್ತಿತ್ತು. ಅಂದಹಾಗೆ ಗಬ್ಬರ್ ಸಿಂಗ್ ಸಿನಿಮಾದಲ್ಲಿ ಈ ಡೈಲಾಗ್ನ್ನ ಹೇಳೋವಾಗ ಅಲ್ಲಿ ಇದ್ದದ್ದೂ ಎರಡೇ ಜನ ಅನ್ನೋದನ್ನ ಮರೆಯೋ ಹಾಗಿಲ್ಲ.
ಅಂದಹಾಗೆ ಇದೇನು ಗೂಗಲ್ನ ಹೊಸ ಅನ್ವೇಷಣೆಯೇನು ಅಲ್ಲ. ಕಳೆದ ವರ್ಷವೂ ಈ ವಿಚಾರ ಬಹಳ ಪಾಪ್ಯೂಲರ್ ಆಗಿತ್ತು. ಆದರೆ ಅಮ್ಜಾದ್ ಖಾನ್ ಬರ್ತ ಡೇ ಹಿನ್ನೆಲೆ ನೆಟ್ಟಿಗರು ಈ ವಿಚಾರವನ್ನ ಮತ್ತೊಮ್ಮೆ ಹಂಚಿಕೊಳ್ತಾ ಇದ್ದಾರೆ.