
ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ವೀಕೆಂಡ್ಗೂ ಮೊದಲು ನನ್ನ ಆರೋಗ್ಯ ಸುಧಾರಿಸಬಹುದು ಎಂದು ಅಂದಾಜಿಸಿದ್ದೆ. ಆದರೆ ನನ್ನ ವೈದ್ಯರು ನನಗೆ ವಿಶ್ರಾಂತಿಯ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಈ ಬಾರಿಯ ವೀಕೆಂಡ್ ಬಿಗ್ಬಾಸ್ ಶೋ ಮಿಸ್ ಮಾಡಿಕೊಳ್ಳಲಿದ್ದೇನೆ.
ಬಿಗ್ಬಾಸ್ನ ಕ್ರಿಯೇಟಿವ್ ಟೀಂ ಈ ವಾರದ ಎಲಿಮಿನೇಷನ್ಗೆ ಯಾವ ರೀತಿಯಲ್ಲಿ ಪ್ಲಾನ್ ಮಾಡಬಹುದು ಎಂದು ನೋಡೋದಕ್ಕೆ ಉತ್ಸುಕನಾಗಿದ್ದೇನೆ ಎಂದು ಟ್ವೀಟಾಯಿಸಿದ್ದಾರೆ.
ಸುದೀಪ್ ಯಾವ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅನ್ನೋದ್ರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸುದೀಪ್ ಅನಾರೋಗ್ಯದಿಂದಾಗಿ ಬಿಗ್ಬಾಸ್ ಸೀಸನ್ 8ರ ಕತೆ ಏನಾಗುತ್ತೋ ಅಂತಾ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ .