alex Certify ಆಮೀರ್​ ಖಾನ್​ ಸೋಂಕಿಗೊಳಗಾಗುತ್ತಿದ್ದಂತೆಯೇ ʼಕೊರೊನಾʼ ಪರೀಕ್ಷೆ ಮಾಡಿಸಿಕೊಂಡ ಬಾಲಿವುಡ್​ ನಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮೀರ್​ ಖಾನ್​ ಸೋಂಕಿಗೊಳಗಾಗುತ್ತಿದ್ದಂತೆಯೇ ʼಕೊರೊನಾʼ ಪರೀಕ್ಷೆ ಮಾಡಿಸಿಕೊಂಡ ಬಾಲಿವುಡ್​ ನಟಿ..!

ಬಾಲಿವುಡ್​ ನಟ ಆಮೀರ್​ ಖಾನ್​ ಕೊರೊನಾ ಸೋಂಕಿಗೆ ಒಳಗಾಗಿದ್ದು ಪ್ರಸ್ತುತ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ ಎಂದು ಅವರ ವಕ್ತಾರ ಮಾಹಿತಿ ನೀಡಿದ್ದಾರೆ. 56 ವರ್ಷದ ನಟನ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ.

ಆದರೆ ಆಮೀರ್​ ಖಾನ್​ ಸಂಪರ್ಕದಲ್ಲಿ ಇದ್ದವರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಹಾಗೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಆಮೀರ್​ ಖಾನ್​ ವಕ್ತಾರ ಮನವಿ ಮಾಡಿದ್ದಾರೆ.

ಆಮೀರ್​ ಖಾನ್​ಗೆ ಕೊರೊನಾ ಇರೋದು ದೃಢವಾಗುತ್ತಿದ್ದಂತೆಯೇ ಕಿಯಾರಾ ಅಡ್ವಾಣಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ನಿತೇಶ್​ ತಿವಾರಿ ನಿರ್ದೇಶನದ ಕಮರ್ಷಿಯಲ್​ವೊಂದರಲ್ಲಿ ಆಮೀರ್ ಹಾಗೂ ಕಿಯಾರಾ ಜೊತೆಯಾಗಿ ನಟಿಸುತ್ತಿದ್ದರು.

ಕಾರ್ತಿಕ್​ ಆರ್ಯನ್​ ಜೊತೆ ಭೂಲ್​ ಬಲ್ಲಯ್ಯಾ 3 ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆಯೂ ಕಾರ್ತಿಕ್​ಗೆ ಸೋಂಕು ಬಂದ ಕಾರಣ ಕಿಯಾರಾ ಪರೀಕ್ಷೆಗೆ ಒಳಗಾಗಿದ್ದರು. ಆದರೆ ಆಗ ಕಿಯಾರಾ ವರದಿ ನೆಗೆಟಿವ್​ ಬಂದಿತ್ತು.

ಆಮೀರ್​ ಖಾನ್​ ಜೊತೆ ನಟಿಸಿದ ಕಾರಣಕ್ಕೆ ಕಿಯಾರಾ ಇದೀಗ ಇನ್ನೊಮ್ಮೆ ಕೊರೊನಾ ಟೆಸ್ಟ್​ಗೆ ಒಳಗಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...