alex Certify ಕುಟುಂಬದೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ ರಾಕಿಂಗ್ ಸ್ಟಾರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ ರಾಕಿಂಗ್ ಸ್ಟಾರ್‌

ಕೆಜಿಎಫ್‌: ಚಾಪ್ಟರ್ 2 ಶೂಟಿಂಗ್ ಮುಗಿಸಿಕೊಂಡು ಸ್ವಲ್ಪ ಬ್ರೇಕ್ ಪಡೆದುಕೊಡಿರುವ ನಟ ಯಶ್‌ ತಮ್ಮ ಕುಟುಂಬದೊಂದಿಗೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿದ್ದಾರೆ.

ಪತ್ನಿ ರಾಧಿಕಾ ಪಂಡಿತ್‌, ಮಗ ಯಥರ್ವ ಹಾಗೂ ಮಗಳು ಆಯ್ರಾ ಜೊತೆಗೆ ಮಾಲ್ಡೀವ್ಸ್‌ನ ಬೀಚ್‌ ಒಂದರ ಬಳಿ ತೆಗೆದುಕೊಂಡ ಫೋಟೋ ಒಂದನ್ನು ಯಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ಸ್ವರ್ಗವೇನಾದರೂ ಉಷ್ಣವಲಯದಲ್ಲಿದ್ದರೆ ಅದು ಮಾಲ್ಡೀವ್ಸ್‌ನಲ್ಲೇ ಇದೆ……ನಾವಿಲ್ಲಿಗೆ ಬಂದಿದ್ದೇವೆ!!,” ಎಂದು ಯಶ್‌ ತಮ್ಮ ಪೋಸ್ಟ್ ಮಾಡಿದ್ದಾರೆ.

ಕಳೆದ ಮೂರು ತಿಂಗಳುಗಳಿಂದ ನಿರಂತರ ಶೂಟಿಂಗ್ ಕಾರಣದಿಂದಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗದಿದ್ದ ಯಶ್‌ಗೆ ಈಗ ದೊಡ್ಡ ರಿಲೀಫ್‌ ಸಿಕ್ಕಂತಾಗಿದೆ.

ಬಾಲಿವುಡ್‌ ನಟ ಸಂಜಯ್‌ ದತ್‌ ಜೊತೆಗೆ ಕೆಜಿಎಫ್‌ 2ನ ಕ್ಲೈಮ್ಯಾಕ್ಸ್‌ ಸನ್ನಿವೇಶದ ಚಿತ್ರೀಕರಣವನ್ನು ಮುಗಿಸಿದ್ದಾರೆ ಯಶ್. ಎರಡು ವರ್ಷಗಳ ನಿರಂತರ ಶೂಟಿಂಗ್ ಬಳಿಕ ಕಳೆದ ವಾರವಷ್ಟೇ ಚಿತ್ರ ಟ್ರೇಲರ್‌ ಬಿಡುಗಡೆಯಾಗಿದ್ದು, ಭಾರೀ ಧೂಳೆಬ್ಬಿಸಿ ಹೊಸ ದಾಖಲೆ ಬರೆದಿದೆ.

ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ.

ಅಕ್ಟೋಬರ್‌ 2020ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರವು ಕೊರೋನಾ ವೈರಸ್ ಕಾರಣದಿಂದ ನಿರ್ಮಾಣ ಕಾರ್ಯ ನಿಧಾನವಾಗಿ ಸಾಗಿದ್ದು ಬಿಡುಗಡೆಯ ದಿನಾಂಕ ತಡವಾಗುತ್ತಲೇ ಇದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...