alex Certify ಕುತೂಹಲ ಕೆರಳಿಸಿದ `ಕೆಜಿಎಫ್ ಚಾಪ್ಟರ್-2′ ಫೋಸ್ಟರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲ ಕೆರಳಿಸಿದ `ಕೆಜಿಎಫ್ ಚಾಪ್ಟರ್-2′ ಫೋಸ್ಟರ್ಸ್

Yash in a new still from KGF: Chapter 2.

ಕೆಜಿಎಫ್ ಚಾಪ್ಟರ್-2 ಸದ್ಯ ಎಲ್ಲರ ನಿರೀಕ್ಷಿತ ಚಿತ್ರ. ಕೆಜಿಎಫ್ ಚಾಪ್ಟರ್ 1ರ ಮೂಲಕ ಸಾಕಷ್ಟು ದಾಖಲೆ ಬರೆದ ಯಶ್ ಎರಡನೇ ಚಾಪ್ಟರ್ ನಲ್ಲಿ ಯಾವ ರೂಪದಲ್ಲಿ ಬರ್ತಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಮಧ್ಯೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.

ಪ್ರಶಾಂತ್ ನೀಲ್, ಟ್ವೀಟರ್ ನಲ್ಲಿ ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಹಾಗೆ ಫೋಸ್ಟರ್ ಹಂಚಿಕೊಂಡಿದ್ದಾರೆ. ಫೋಸ್ಟರ್ ನಲ್ಲಿ ಯಶ್ ಕತ್ತಲೆ ಜಾಗದಲ್ಲಿ ಕುಳಿತುಕೊಂಡಿದ್ದಾರೆ. ಇದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ, ಚಿತ್ರದ ಟೀಸರ್ ಜನವರಿ 8ರಂದು ಬಿಡುಗಡೆಯಾಗಲಿದೆ. ಯಶ್ ಹುಟ್ಟುಹಬ್ಬಕ್ಕೆ ಚಿತ್ರತಂಡದಿಂದ ಇದು ಉಡುಗೊರೆಯಾಗಲಿದೆ.

ಇದ್ರ ಜೊತೆ ಚಿತ್ರ ತಂಡ ಹಂಚಿಕೊಂಡ ಸುದ್ದಿ ಪತ್ರಿಕೆಯೊಂದರ ತುಣುಕು ಎಲ್ಲರ ಗಮನ ಸೆಳೆದಿದೆ. ಹಳೆ ಪೇಪರ್ ತುಣುಕಿನಂತೆ ಇದು ಕಾಣ್ತಿದೆ. ಇದನ್ನು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ರಾಕಿ ಭಾಯ್ ನಾಯಕನೋ, ಖಳನಾಯಕನೋ ಎಂಬ ಶೀರ್ಷಿಕೆ ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...