alex Certify ಸರ್ವಾಧಿಕಾರಿ ಗಡಾಫಿ ಜತೆಗಿದ್ದ ಕತ್ರಿನಾ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ವಾಧಿಕಾರಿ ಗಡಾಫಿ ಜತೆಗಿದ್ದ ಕತ್ರಿನಾ ಫೋಟೋ ವೈರಲ್

Katrina Kaif's Fanpage Wished Her on Birthday by Sharing Old ...

ಫಿಲ್ಮ್ ಸ್ಟಾರ್ ಗಳ ಬರ್ತ್ ಡೆ ದಿನ ಜಾಲತಾಣಗಳಲ್ಲಿ ಟ್ರೆಂಡ್ ಆಗಲು ಹ್ಯಾಷ್ಟ್ಯಾಗ್ ನೊಂದಿಗೆ ವಿಷ್ ಮಾಡುವುದು ಸಾಮಾನ್ಯ. ಸ್ಟಾರ್ ಗಳ ಫ್ಯಾನ್ ಪೇಜ್ ಗಳಲ್ಲಿ ವೈಯಕ್ತಿಕ ಗ್ರೀಟಿಂಗ್ ಗಳು ಅವರ ಹಳೆಯ ಫೋಟೋಗಳು ಪೋಸ್ಟ್ ಆಗುತ್ತವೆ.

ಜುಲೈ 16 ರಂದು ಬಾಲಿವುಡ್‌ನ ಖ್ಯಾತ ಅಭಿನೇತ್ರಿ ಕತ್ರಿನಾ ಕೈಫ್ ಅವರ ಹುಟ್ಟಿದ ದಿನ. ಅಂದು ಅವರ 18 ವರ್ಷ ಹಳೆಯ ಫೋಟೋವೊಂದು ಅವರ ಅಭಿಮಾನಿ ಬಳಗದ ಪೇಜ್ ನಲ್ಲಿ ಹರಿದಾಡಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿವಾದಿತ ವ್ಯಕ್ತಿ ಲಿಬಿಯಾ ದೇಶದ ಸರ್ವಾಧಿಕಾರಿ ಜನರಲ್ ಗಡಾಫಿ ಜತೆ ಕತ್ರಿನಾ ಕೈಫ್ ಇರುವ ಫೋಟೋ ಅದಾಗಿದೆ. ಕತ್ರಿನಾ ಅವರು 18 ವರ್ಷದವರಿದ್ದಾಗ, ಬಾಲಿವುಡ್ ಗೆ ಎಂಟ್ರಿ ಕೊಡುವುದಕ್ಕೂ ಒಂದು ವರ್ಷ ಮುಂಚೆ ಫ್ಯಾಶನ್ ಶೋ ಒಂದಕ್ಕೆ ತೆರಳಿದ್ದ ಸಂದರ್ಭದಲ್ಲಿ ತೆಗೆದ ಚಿತ್ರ ಇದಾಗಿದೆ. ಚಿತ್ರದಲ್ಲಿ ನೇಹಾ ದೂಫಿಯಾ, ಅದಿತಿ ಗೌತ್ರಿಕರ್, ಅಂಚಲ್ ಕುಮಾರ್, ಶಮಿತಾ ಸಿಂಗ್ ಮತ್ತು ಜನರಲ್ ಗಡಾಫಿ ಇದ್ದಾರೆ.

ಜನರಲ್ ಗಡಾಫಿ ಜತೆಗಿದ್ದ `ಹೆಮ್ಮೆಯ'(ಪ್ರಿವಿಜೇಜ್)ಕ್ಷಣ ಎಂಬ ಕ್ಯಾಪ್ಶನ್ನೊಂದಿಗೆ ಶಮಿತಾ ಸಿಂಗ್ 2017 ರಲ್ಲಿ ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದರು. ಆದರೆ, ಫೋಟೋ ಬಗ್ಗೆ ವಿವಾದ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಡಿಲಿಟ್ ಮಾಡಿದ್ದರು. ಆದರೆ, ಕತ್ರಿನಾ ಫ್ಯಾನ್ ಫಾಲೋವರ್ ಗಳು ಮಾತ್ರ ಇನ್ನೂ ಅದನ್ನು ಶೇರ್ ಮಾಡುತ್ತಲೇ ಇದ್ದಾರೆ. “ಎಂಥ ಮುಜುಗರದ ಸನ್ನಿವೇಶ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...