
ಇನ್ಸ್ಟಾಗ್ರಾಂನಲ್ಲಿ ಮನೆಯಲ್ಲಿ ತಯಾರಿಸಿದ ದಕ್ಷಿಣ ಭಾರತದ ಊಟದ ಫೋಟೋ ಶೇರ್ ಮಾಡಿರುವ ನಟಿ ಕರೀನಾ ಕಪೂರ್ ತಮಗೆ ಈ ಆಹಾರ ತುಂಬಾನೇ ಇಷ್ಟ ಎಂದಿದ್ದಾರೆ.
ದಕ್ಷಿಣ ಭಾರತದ ಸಂಪ್ರದಾಯದಂತೆ ಬಾಳೆ ಎಲೆಯಲ್ಲೇ ಈ ಊಟಗಳನ್ನ ಬಡಿಸಲಾಗಿದೆ. ಬಾಳೆ ಎಲೆ ಮೇಲೆ ಹಪ್ಪಳ, ಅನ್ನ, ಸಾರು, ಕಾಯಿ ಚಟ್ನಿ, ಬಾಳೆ ಕಾಯಿ ಚಿಪ್ಸ್ ಹಾಗೂ ಒಂದಿಡೀ ಬಾಳೆ ಹಣ್ಣು ಇಡಲಾಗಿದೆ. ಇದು ಮಾತ್ರವಲ್ಲದೇ ಇನ್ನೊಂದು ಬಗೆಯ ಸಾರು, ರಸಂ ಸೇರಿದಂತೆ ಅನೇಕ ಖಾದ್ಯಗಳನ್ನ ಕಾಣಬಹುದಾಗಿದೆ.