alex Certify ಮೂರನೇ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಕರೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಕರೀನಾ

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ತಮ್ಮ ಇನ್​ಸ್ಟಾಗ್ರಾಂ ಖಾತೆ ಮೂಲಕ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್​ ಒಂದನ್ನ ನೀಡಿದ್ದಾರೆ. ತಾವು ಎರಡು ಬಾರಿ ಗರ್ಭಿಣಿಯಾಗಿದ್ದ ವೇಳೆ ಆದ ಅನುಭವಗಳ ಬಗ್ಗೆ ಅವರು ಪುಸ್ತಕವೊಂದನ್ನ ಬಿಡುಗಡೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ .‘ಕರೀನಾ ಕಪೂರ್​ ಖಾನ್ಸ್​ ಪ್ರೆಗ್ಸನಿ ಬೈಬಲ್​ ಎಂದು ಪುಸ್ತಕಕ್ಕೆ ಹೆಸರಿಡಲಾಗಿದೆ. ಈ ಪುಸ್ತಕವು ಅವರ ಹೃದಯಕ್ಕೆ ತುಂಬಾ ಹತ್ತಿರ ಎಂದು ಅನಿಸಿದ ಕಾರಣಕ್ಕೆ ಕರೀನಾ ಕಪೂರ್​ ಈ ಪುಸ್ತಕವನ್ನ ತಮ್ಮ ಮೂರನೇ ಮಗು ಎಂದು ಕರೆದಿದ್ದಾರೆ. ಅಲ್ಲದೇ ಈ ಪುಸ್ತಕದಲ್ಲಿರುವ ಮಾಹಿತಿಯ ಬಗ್ಗೆ ಪ್ರಸೂತಿ ತಜ್ಞರು, ಸ್ತ್ರೀ ರೋಗ ತಜ್ಞರೂ ಸಹ ಅನುಮೋದನೆ ನೀಡಿದ್ದಾರಂತೆ.

ತಮ್ಮ ಪುಸ್ತಕ ಬಿಡುಗಡೆ ಬಗ್ಗೆ ಕರೀನಾ ಮೂರು ಪೋಸ್ಟ್​ಗಳ ಮೂಲಕ ಮಾಹಿತಿ ನೀಡಿದ್ದಾರೆ. ಮೊದಲನೇ ಪೋಸ್ಟ್​ನಲ್ಲಿ ಅಲ್ಟ್ರಾಸೌಂಡ್​ ಫೋಟೋ, ಎರಡನೇ ವಿಡಿಯೋದಲ್ಲಿ ಪುಸ್ತಕವನ್ನು ಹಾಗೂ ಮೂರನೇ ಪೋಸ್ಟ್​ ಮೂಲಕ ಪುಸ್ತಕದ ಮುಖಪುಟವನ್ನ ರಿವೀಲ್​ ಮಾಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...