ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಒಂದನ್ನ ನೀಡಿದ್ದಾರೆ. ತಾವು ಎರಡು ಬಾರಿ ಗರ್ಭಿಣಿಯಾಗಿದ್ದ ವೇಳೆ ಆದ ಅನುಭವಗಳ ಬಗ್ಗೆ ಅವರು ಪುಸ್ತಕವೊಂದನ್ನ ಬಿಡುಗಡೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ .‘ಕರೀನಾ ಕಪೂರ್ ಖಾನ್ಸ್ ಪ್ರೆಗ್ಸನಿ ಬೈಬಲ್ ಎಂದು ಪುಸ್ತಕಕ್ಕೆ ಹೆಸರಿಡಲಾಗಿದೆ. ಈ ಪುಸ್ತಕವು ಅವರ ಹೃದಯಕ್ಕೆ ತುಂಬಾ ಹತ್ತಿರ ಎಂದು ಅನಿಸಿದ ಕಾರಣಕ್ಕೆ ಕರೀನಾ ಕಪೂರ್ ಈ ಪುಸ್ತಕವನ್ನ ತಮ್ಮ ಮೂರನೇ ಮಗು ಎಂದು ಕರೆದಿದ್ದಾರೆ. ಅಲ್ಲದೇ ಈ ಪುಸ್ತಕದಲ್ಲಿರುವ ಮಾಹಿತಿಯ ಬಗ್ಗೆ ಪ್ರಸೂತಿ ತಜ್ಞರು, ಸ್ತ್ರೀ ರೋಗ ತಜ್ಞರೂ ಸಹ ಅನುಮೋದನೆ ನೀಡಿದ್ದಾರಂತೆ.
ತಮ್ಮ ಪುಸ್ತಕ ಬಿಡುಗಡೆ ಬಗ್ಗೆ ಕರೀನಾ ಮೂರು ಪೋಸ್ಟ್ಗಳ ಮೂಲಕ ಮಾಹಿತಿ ನೀಡಿದ್ದಾರೆ. ಮೊದಲನೇ ಪೋಸ್ಟ್ನಲ್ಲಿ ಅಲ್ಟ್ರಾಸೌಂಡ್ ಫೋಟೋ, ಎರಡನೇ ವಿಡಿಯೋದಲ್ಲಿ ಪುಸ್ತಕವನ್ನು ಹಾಗೂ ಮೂರನೇ ಪೋಸ್ಟ್ ಮೂಲಕ ಪುಸ್ತಕದ ಮುಖಪುಟವನ್ನ ರಿವೀಲ್ ಮಾಡಿದ್ದಾರೆ.
https://www.instagram.com/p/CRGK-zKJlza/?utm_source=ig_web_copy_link
https://www.instagram.com/p/CRGVdbUpfPC/?utm_source=ig_web_copy_link
https://www.instagram.com/p/CRGdTWnJa48/?utm_source=ig_web_copy_link