alex Certify ಭಾರೀ ಕುತೂಹಲ ಮೂಡಿಸಿದ ‘ಕಾಂತಾರ -2’ ಕಥೆ: ಸ್ಕ್ರಿಪ್ಟ್ ಕೆಲಸ ಆರಂಭಿಸಿದ ರಿಷಬ್ ಶೆಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಕುತೂಹಲ ಮೂಡಿಸಿದ ‘ಕಾಂತಾರ -2’ ಕಥೆ: ಸ್ಕ್ರಿಪ್ಟ್ ಕೆಲಸ ಆರಂಭಿಸಿದ ರಿಷಬ್ ಶೆಟ್ಟಿ

‘ಕಾಂತರಾ 2’ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ರಿಷಬ್ ಶೆಟ್ಟಿ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನದ ‘ಕಾಂತಾರ’ ಭರ್ಜರಿ ಯಶಸ್ಸಿನ ನಂತರ ‘ಕಾಂತಾರ 2’ ಆರಂಭವಾಗಲಿದೆ ಎಂದು ಹೇಳಲಾಗಿತ್ತು.

ಅದಕ್ಕೀಗ ಕಾಲ ಕೂಡಿ ಬಂದಿದ್ದು, ರಿಷಬ್ ಶೆಟ್ಟಿ ‘ಕಾಂತಾರ 2’ ಸ್ಕ್ರಿಪ್ಟ್ ಕೆಲಸ ಆರಂಭಿಸಿದ್ದಾರೆ. 2023 ರಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ. ರಿಷಬ್ ಶೆಟ್ಟಿ ತಾವು ಭಾಗಿಯಾಗಬೇಕಿರುವ ವಿವಿಧ ಕಾರ್ಯಕ್ರಮಗಳು ಮತ್ತು ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲಿದ್ದಾರೆ. 2023ರ ಮಧ್ಯದಿಂದ ಚಿತ್ರಿಕರಣ ಆರಂಭಿಸಲಿದ್ದಾರೆ. ಹೊಂಬಾಳೆ ಸಂಸ್ಥೆಯಿಂದಲೇ ‘ಕಾಂತಾರ 2’ ನಿರ್ಮಾಣವಾಗಲಿದೆ.

‘ಕಾಂತಾರ 2’ ಕಥೆ ಬಗ್ಗೆ ಕುತೂಹಲ ಹೆಚ್ಚಿದೆ. ‘ಕಾಂತಾರ’ ಕ್ಲೈಮ್ಯಾಕ್ಸ್ ನಲ್ಲಿ ನಾಯಕಿ ಲೀಲಾ ಗರ್ಭಿಣಿಯಾಗಿರುತ್ತಾಳೆ. ಭಾಗ ಎರಡರಲ್ಲಿ ಶಿವ -ಲೀಲಾ ಅವರ ಪುತ್ರನ ಬಗೆಗಿನ ಸಿನಿಮಾ ಇರಬಹುದು, ಇಲ್ಲವೇ ಆರಂಭದಲ್ಲಿ ಬರುವ ಶಿವನ ತಂದೆ ಕೋಲಾ ಕಟ್ಟಿಕೊಂಡು ಕಾಡೊಳಗೆ ಕಾಣೆಯಾಗಿವುದರ ಕಥೆ ಇರಬಹುದು ಎಂದೆಲ್ಲ ಚರ್ಚೆ ನಡೆದಿದೆ.

ಕನ್ನಡ ಸಿನಿಮಾ ಆಗಿ ನಿರ್ಮಾಣವಾದ ‘ಕಾಂತರ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿ ಎಲ್ಲಾ ಭಾಷೆಯ ಪ್ರೇಕ್ಷಕರ ಗಮನ ಸೆಳೆದಿತ್ತು. ‘ಕಾಂತಾರ 2’ ಬಗ್ಗೆ ಅದಕ್ಕಿಂತಲೂ ನಿರೀಕ್ಷೆ ಹೆಚ್ಚಿರುವುದರಿಂದ ರಿಷಬ್ ಶೆಟ್ಟಿ ಸ್ಕ್ರಿಪ್ ಕೆಲಸ ಆರಂಭಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...