alex Certify ಸಹೋದರನ ಮದುವೆಯಲ್ಲಿ ನಟಿ ಕಂಗನಾ ಮಿಂಚಿಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನ ಮದುವೆಯಲ್ಲಿ ನಟಿ ಕಂಗನಾ ಮಿಂಚಿಂಗ್​..!

ಸಹೋದರನ ಮದುವೆ ಸಮಾರಂಭದಲ್ಲಿ ಬ್ಯುಸಿ ಇದ್ದ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾದಲ್ಲಿ ತಾವು ಧರಿಸಿದ್ದ ಲೆಹಂಗಾ ಫೋಟೋಗಳನ್ನ ಪೋಸ್ಟ್ ಮಾಡಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.

ನೇರಳೆ ಹಾಗೂ ನೀಲಿ ಬಣ್ಣದ ವಿಶಿಷ್ಟ ಸಂಯೋಜನೆಯ ಸಭ್ಯಸಾಚಿ ಲೆಹೆಂಗಾದಲ್ಲಿ ನಟಿ ಕಂಗನಾ ಸಖತ್​ ಹಾಟ್​ ಆಗಿ ಕಾಣುತ್ತಿದ್ದಾರೆ. ತುರುಬಿನ ರೀತಿಯಲ್ಲಿ ಕೇಶ ವಿನ್ಯಾಸ ಮಾಡಿಕೊಂಡಿರುವ ನಟಿ ಗುಲಾಬಿ ಹೂವಿನಲ್ಲಿ ತುರುಬನ್ನ ಸಿಂಗರಿಸಿಕೊಂಡಿದ್ದಾರೆ. ಇದರ ಜೊತೆಯಲ್ಲಿ ನೆಕ್​ಪೀಸ್​ ಹಾಗೂ ಮಾಂಗ್​ ಟೀಕಾ ಕೂಡ ನಟಿಯ ಅಂದವನ್ನ ಇನ್ನಷ್ಟು ಹೆಚ್ಚಿಸಿದೆ.

ಕಳೆದ ಕೆಲ ದಿನಗಳಿಂದ ಮದುವೆಗೂ ಮುನ್ನಾ ದಿನಗಳ ಅನೇಕ ಫೋಟೋಗಳನ್ನ ಕಂಗನಾ ಶೇರ್​ ಮಾಡಿದ್ದಾರೆ. ಗುಡ್ ಅರ್ಥ್ ಇಂಡಿಯಾ ವಿನ್ಯಾಸಗೊಳಿಸಿದ ರೇಷ್ಮೆ ಲೆಹಂಗಾವನ್ನ ನಟಿ ಮೆಹಂದಿ ಕಾರ್ಯಕ್ರಮಕ್ಕೆ ಧರಿಸಿದ್ದರು.

https://www.instagram.com/p/CHcu-IVFIsX/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...