ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳು ಮಾತ್ರವಲ್ಲದೇ ಫಿಟ್ನೆಸ್ ಮೂಲಕವೂ ಸುದ್ದಿಯಲ್ಲಿ ಇರುವಂತಹ ನಟಿ.
ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಕಂಗನಾ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಯೋಗ, ವ್ಯಾಯಾಮಗಳನ್ನ ತಪ್ಪದೇ ಮಾಡ್ತಾರೆ.
ಫಿಟ್ನೆಸ್ ಉತ್ಸಾಹಿ ಕಂಗನಾ ಇದೀಗ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.
ಸೆಲೆಬ್ರಿಟಿ ಟ್ರೇನರ್, ನಮ್ರತಾ ಪುರೋಹಿತ್ ಜೊತೆ ಕಂಗನಾ ದೇಹದಂಡನೆ ಮಾಡ್ತಿರುವ ವಿಡಿಯೋ ಇದಾಗಿದೆ. ಜೋ ಫಿಟ್ ಹೈ ವೋ ಹಿಟ್ ಹೈ ( ಯಾರು ಫಿಟ್ ಆಗಿರ್ತಾರೋ ಅವರು ಹಿಟ್ ಆಗ್ತಾರೆ ) ಎಂದು ಶೀರ್ಷಿಕೆ ನೀಡಿದ್ದಾರೆ.
https://www.instagram.com/p/CJurVe6h2Ul/?utm_source=ig_web_copy_link