alex Certify 7 ತಿಂಗಳ ನಂತ್ರ ಕೆಲಸಕ್ಕೆ ಮರಳಿದ ಕಂಗನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ತಿಂಗಳ ನಂತ್ರ ಕೆಲಸಕ್ಕೆ ಮರಳಿದ ಕಂಗನಾ

जे. जयललिता की वास्तविक तस्वीर और कंगना रनौत जयललिता के लुक में

ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆಯಾಗ್ತಿಲ್ಲ. ಸಿನಿಮಾ ಶೂಟಿಂಗ್ ಕೂಡ ಸಂಪೂರ್ಣವಾಗಿ ನಿಂತಿತ್ತು. ಇದ್ರಿಂದ ಚಿತ್ರರಂಗ ನಂಬಿದ್ದ ಅನೇಕರ ಬದುಕು ಬೀದಿಗೆ ಬಂದಿತ್ತು. ಈಗ ನಿಧಾನವಾಗಿ ಶೂಟಿಂಗ್ ಶುರುವಾಗಿದೆ. ಸಿನಿಮಾ ಹಾಗೂ ಕಿರುತೆರೆ ಕಲಾವಿದರು ಕೆಲಸಕ್ಕೆ ವಾಪಸ್ ಆಗ್ತಿದ್ದಾರೆ.

ಬಾಲಿವುಡ್ ನಟಿ ಕಂಗನಾ ಕೂಡ ಶೂಟಿಂಗ್ ಶುರು ಮಾಡಿದ್ದಾರೆ. ಈ ಖುಷಿ ಸುದ್ದಿಯನ್ನು ಕಂಗನಾ ಅಭಿಮಾನಿಗಳಿಗೆ ನೀಡಿದ್ದಾರೆ. ಪ್ರಿಯ ಸ್ನೇಹಿತರೇ, ಇಂದು ಬಹಳ ವಿಶೇಷ ದಿನ. 7 ತಿಂಗಳ ನಂತರ ನಾನು ಇಂದು ಕೆಲಸಕ್ಕೆ ಮರಳುತ್ತಿದ್ದೇನೆ. ನನ್ನ ಅತ್ಯಂತ ಮಹತ್ವಾಕಾಂಕ್ಷೆಯ ದ್ವಿಭಾಷಾ ಚಿತ್ರ ತಲೈವಿ ಗಾಗಿ ನಾನು ದಕ್ಷಿಣ ಭಾರತದ ಕಡೆಗೆ ಹೋಗುತ್ತಿದ್ದೇನೆ. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಿಮ್ಮ ಪ್ರಾರ್ಥನೆ ನನಗೆ ಅವಶ್ಯಕವೆಂದು ಕಂಗನಾ ಹೇಳಿದ್ದಾಳೆ.

ಕೆಲ ಸೆಲ್ಫಿಗಳನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲ ಸೆಲ್ಫಿಯನ್ನು ಇಂದು ಬೆಳಿಗ್ಗೆ ಕ್ಲಿಕ್ ಮಾಡಿದ್ದೇನೆ. ನೀವೆಲ್ಲರೂ ಇಷ್ಟ ಪಡುತ್ತೀರೆಂದು ಭಾವಿಸುತ್ತೇನೆಂದು ಕಂಗನಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...